ಮೈಸೂರು: ಸುಗ್ರೀವಾಜ್ಞೆ ಮೂಲಕ ಮಸೂದೆಗಳನ್ನು ತಂದು ಸಂವಿಧಾನದ ಶಕ್ತಿಯನ್ನು ದುರ್ಬಲಗೊಳಿಸಿ, ಜನರ ಹಕ್ಕನ್ನು ಕಿತ್ತುಕೊಳ್ಳುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಖಂಡಿಸಿ ಐಕ್ಯ ಹೋರಾಟ ವೇದಿಕೆ ಸೋಮವಾರ ಬಂದ್ಗೆ ಕರೆ ನೀಡಿದ್ದು, ಇದಕ್ಕೆ ಜಿಲ್ಲೆಯಲ್ಲಿ ಬೆಂಬಲ ವ್ಯಕ್ತವಾಗಿದೆ.
ಮೈಸೂರು: ಸೋಮವಾರದ ಕರ್ನಾಟಕ ಬಂದ್ಗೆ ಹಲವು ಸಂಘಟನೆಗಳ ಬೆಂಬಲ - Karnataka band latest news
ಮೈಸೂರು ಜಿಲ್ಲೆಯ ಐಕ್ಯ ಹೋರಾಟ ವೇದಿಕೆ, ಪ್ರಗತಿಪರ ಸಂಘಟನೆಗಳು, ರೈತ ಪರ ಸಂಘಟನೆಗಳು ಸೇರಿದಂತೆ ಸುಮಾರು 16 ಕನ್ನಡಪರ ಸಂಘಟನೆಗಳು ಸೋಮವಾರದ ಬಂದ್ಗೆ ಬೆಂಬಲ ಸೂಚಿಸಿವೆ.
![ಮೈಸೂರು: ಸೋಮವಾರದ ಕರ್ನಾಟಕ ಬಂದ್ಗೆ ಹಲವು ಸಂಘಟನೆಗಳ ಬೆಂಬಲ Karnataka band on Monday](https://etvbharatimages.akamaized.net/etvbharat/prod-images/768-512-8948338-963-8948338-1601119455960.jpg)
ಸೆ.28 ರಂದು ಕರ್ನಾಟಕ ಬಂದ್
ಕರ್ನಾಟಕ ಬಂದ್ಗೆ ಹಲವು ಸಂಘಟನೆಗಳ ಬೆಂಬಲ
ಸೆ.28 ರಂದು ಕರ್ನಾಟಕ ಬಂದ್ಗೆ ಕರೆ ನೀಡಲಾಗಿದ್ದು, ಈ ಹೋರಾಟಕ್ಕೆ ಮೈಸೂರು ಜಿಲ್ಲೆಯ ಐಕ್ಯ ಹೋರಾಟ ವೇದಿಕೆ, ಪ್ರಗತಿಪರ ಸಂಘಟನೆಗಳು, ರೈತ ಪರ ಸಂಘಟನೆಗಳು ಸೇರಿದಂತೆ ಸುಮಾರು 16 ಕನ್ನಡಪರ ಸಂಘಟನೆಗಳು ಸೋಮವಾರದ ಬಂದ್ಗೆ ಬೆಂಬಲ ಸೂಚಿಸಿವೆ.
ಇಂದು ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಸಭೆ ನಡೆಸಿ ಈ ಕುರಿತು ಚರ್ಚಿಸಿದರು. ಈ ಎಲ್ಲಾ ಸಂಘಟನೆಗಳು ಸೋಮವಾರದ ಕರ್ನಾಟಕ ಬಂದ್ಗೆ ಬೆಂಬಲ ಸೂಚಿಸಿವೆ.