ಮೈಸೂರು:ಸಿದ್ದರಾಮಯ್ಯನವರಿಗೆ ರಾಜ್ಯದ ಹಲವಾರು ಕ್ಷೇತ್ರಗಳಿಂದ ಆಹ್ವಾನ ಬಂದಿದೆ. ಮುಂದಿನ ಚುನಾವಣೆಗೆ ಯಾವ ಕ್ಷೇತ್ರದಲ್ಲಿ ನಿಲ್ಲಬೇಕೆಂಬುದನ್ನು ಅವರೇ ತೀರ್ಮಾನ ಮಾಡುತ್ತಾರೆ. ಹೆಚ್.ವಿಶ್ವನಾಥ್ ರವರು ಸಿದ್ದರಾಮಯ್ಯರನ್ನು ಹುಣಸೂರಿಗೆ ಯಾಕೆ ಆಹ್ವಾನಿಸಿದ್ದಾರೆ ಅಂತ ಗೊತ್ತಿಲ್ಲ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಇದೇ ವೇಳೆ, ಯಾವುದೇ ಕ್ಷೇತ್ರದಿಂದ ನಿಂತರೂ ಚುನಾವಣೆ ಗೆಲ್ಲುವ ಸಾಮರ್ಥ್ಯ ಸಿದ್ದರಾಮಯ್ಯನವರಿಗಿದೆ. ಹಾಗಾಗಿ ಇತರೆ ಪಕ್ಷದ ನಾಯಕರ ಬೆಂಬಲ ಬೇಕಾಗಿಲ್ಲ ಎಂದರು.
ಎಲ್ಲಿಂದ ಸ್ಪರ್ಧಿಸಬೇಕು ಅಂತ ಸಿದ್ದರಾಮಯ್ಯರಿಗೆ ಗೊತ್ತಿದೆ: 'ಹಳ್ಳಿಹಕ್ಕಿ'ಗೆ ಕುಟುಕಿದ ಡಾ.ಯತೀಂದ್ರ - Adagur H. Vishwanath
ಸಿದ್ದರಾಮಯ್ಯ ಅವರನ್ನು ಹೆಚ್.ವಿಶ್ವನಾಥ್ ಹುಣಸೂರಿಗೆ ಕರೆದಿರುವ ವಿಚಾರವಾಗಿ ಮಾತನಾಡಿದ ಡಾ.ಯತೀಂದ್ರ, ಮುಂದಿನ ಚುನಾವಣೆಗೆ ಯಾವ ಕ್ಷೇತ್ರದಲ್ಲಿ ನಿಲ್ಲಬೇಕೆಂದು ಎಂಬುವುದನ್ನು ಸಿದ್ದರಾಮಯ್ಯ ತೀರ್ಮಾನ ಮಾಡುತ್ತಾರೆ ಎಂದರು.
![ಎಲ್ಲಿಂದ ಸ್ಪರ್ಧಿಸಬೇಕು ಅಂತ ಸಿದ್ದರಾಮಯ್ಯರಿಗೆ ಗೊತ್ತಿದೆ: 'ಹಳ್ಳಿಹಕ್ಕಿ'ಗೆ ಕುಟುಕಿದ ಡಾ.ಯತೀಂದ್ರ Karnataka assembly election Siddaramaiah knows where to compete](https://etvbharatimages.akamaized.net/etvbharat/prod-images/768-512-15121312-thumbnail-3x2-bng.jpg)
ಡಾ.ಯತೀಂದ್ರ
ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್ ಸಕ್ರಿಯ ವಿಚಾರವಾಗಿ ಮಾತನಾಡಿ, ಚುನಾವಣೆ ಸಮೀಪಿಸುತ್ತಿದೆ. ಎಲ್ಲಾ ಪಕ್ಷಗಳು ತಯಾರಿ ನಡೆಸುತ್ತಿವೆ. ಅದೇ ರೀತಿ ನಾವು ಪೂರ್ವಸಿದ್ಧತೆ ನಡೆಸುತ್ತೇವೆ. ಕಾಂಗ್ರೆಸ್ ಕಾರ್ಯಕರ್ತರು ಸದೃಢರಾಗಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ:'ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿಲ್ಲ'