ಮೈಸೂರು: ನಗರ ಪ್ರದೇಶಗಳಲ್ಲಿ ಕೆರೆಗಳ ಅವಶ್ಯಕತೆಯ ಬಗ್ಗೆ ತಿಳಿಸಲು ಕಾರಂಜಿ ಕೆರೆ ಹಬ್ಬವನ್ನು ಆಯೋಜಿಸಲಾಗಿದೆ ಎಂದು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಪಿ. ರವಿ ತಿಳಿಸಿದರು.
ಇಂದು ನಗರದ ಪ್ರವಾಸಿ ತಾಣಗಳಲ್ಲಿ ಒಂದಾದ ಕಾರಂಜಿ ಕೆರೆಯಲ್ಲಿ ಎರಡು ದಿನಗಳ ಕಾಲ ಕಾರಂಜಿ ಕೆರೆ ಹಬ್ಬವನ್ನು ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅರಣ್ಯ ಸಂರಕ್ಷಣಾಧಿಕಾರಿ, ಗ್ರಾಮೀಣ ಪ್ರದೇಶದ ಕೆರೆಗಳು ಬಹುತೇಕ ಕೃಷಿ ಚಟುವಟಿಕೆಗೆ ಹಾಗೂ ರೈತರ ಇತರ ಚಟುವಟಿಕೆಗಳಿಗೆ ಉಪಯೋಗವಾಗುತ್ತದೆ. ಆದ್ರೆ ನಗರ ಪ್ರದೇಶದ ಕೆರೆಗಳ ಸ್ಥಿತಿ ಕಾಲ ಬದಲಾದಂತೆ ನೀರಿನ ಸುರಕ್ಷತೆ, ಪ್ರವಾಸೋದ್ಯಮಕ್ಕೆ ಹೇಗೆ ಬಳಕೆಯಾಗಬೇಕೆಂದು ತಿಳಿಸುವ ಸಲುವಾಗಿ ಕಾರಂಜಿಕೆರೆ ಹಬ್ಬವನ್ನು ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ರು.