ಕರ್ನಾಟಕ

karnataka

ETV Bharat / state

ಕಮಲನಾಥ್​​ ದುರಂಹಕಾರವೇ ಸರ್ಕಾರ ಪತನಕ್ಕೆ ಕಾರಣ: ಹೆಚ್​​.ವಿಶ್ವನಾಥ್​ - ಮಧ್ಯಪ್ರದೇಶದಲ್ಲಿ ಕಾಂಗ್ರೆಸ್​​ ಶಾಸಕರು ರಾಜೀನಾಮೆ

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್​​ ಶಾಸಕರು ರಾಜೀನಾಮೆ ನೀಡುತ್ತಿರುವ ಹಿನ್ನೆಲೆ, ಮಾಜಿ ಸಚಿವ ಹೆಚ್​​.ವಿಶ್ವನಾಥ್​​ ಪ್ರತಿಕ್ರಿಯೆ ನೀಡಿದ್ದು, ಮುಖ್ಯಮಂತ್ರಿ ಕಮಲ್​ನಾಥ್​​ರ ದುರಹಂಕಾರವೇ ಸರ್ಕಾರ ಪತನಕ್ಕೆ ಪ್ರಮುಖ ಕಾರಣ ಎಂದಿದ್ದಾರೆ.

H.Vishwanath
ಮಾಜಿ ಸಚಿವ ಹೆಚ್​​.ವಿಶ್ವನಾಥ್​​ ಪ್ರತಿಕ್ರಿಯೆ

By

Published : Mar 10, 2020, 3:23 PM IST

ಮೈಸೂರು: ಮಧ್ಯಪ್ರದೇಶದಲ್ಲಿನ ಮುಖ್ಯಮಂತ್ರಿ ಕಮಲನಾಥ್ ದುರಹಂಕಾರವೇ, ಆ ಸರ್ಕಾರದ ಪತನವಾಗಲು ಕಾರಣ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.

ಮಾಜಿ ಸಚಿವ ಹೆಚ್​​.ವಿಶ್ವನಾಥ್​​ ಪ್ರತಿಕ್ರಿಯೆ

ಇಂದು ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿ ನಡೆಸಿ ನಂತರ ಈಟಿವಿ ಭಾರತ್​​ನೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಪತನಕ್ಕೆ ನಡೆದ ಬೆಳವಣಿಗೆಯ ರೀತಿಯಲ್ಲೆ ಮಧ್ಯಪ್ರದೇಶದಲ್ಲೂ ಸಹ ಸರ್ಕಾರ ಪತನದ ಅಂಚಿನಲ್ಲಿ ಇದೆ. ಇಲ್ಲಿ ಸಮ್ಮಿಶ್ರ ಸರ್ಕಾರದ ನಾಯಕತ್ವ ಹಾಗೂ ಅವರ ದುರಹಂಕಾರದ ಫಲವೇ ಸಮ್ಮಿಶ್ರ ಸರ್ಕಾರ ಪತನ ಆಗಲು ಕಾರಣವಾಯಿತು. ಅದೇ ರೀತಿ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ಅವರ ದುರಹಂಕಾರವೆ ಅಲ್ಲಿನ ಸರ್ಕಾರ ಪತನವಾಗಲು ಕಾರಣ ಎಂದಿದ್ದಾರೆ.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಶ್ವನಾಥ್​, ಜನತಂತ್ರದ ವ್ಯವಸ್ಥೆಯಲ್ಲಿ ಒಬ್ಬ ಪ್ರಧಾನಮಂತ್ರಿ ಬಗ್ಗೆ ಇಷ್ಟೊಂದು ಹಗುರವಾಗಿ ಮಾತನಾಡುವುದು ಸಮಂಜಸವಲ್ಲ, ಸ್ಪೀಕರ್​ ಆಗಿ ಕಾರ್ಯ ನಿರ್ವಹಿಸಿದ ವ್ಯಕ್ತಿ ಈ ರೀತಿ ತಲೆ ಕೆಟ್ಟವರಂತೆ ಮಾತನಾಡಬಾರದು. ರಮೇಶ್​ ಕುಮಾರ್​ ಮೇಲೆ ಎಫ್​.ಐ.ಆರ್​ ಹಾಕಿ ಒದ್ದು ಒಳಗೆ ಹಾಕಬೇಕು ಎಂದು ಕಿಡಿಕಾರಿದ್ದಾರೆ.

ABOUT THE AUTHOR

...view details