ಮೈಸೂರು: ಬೆಂಗಳೂರಿನ ಎನ್ಸಿಬಿ ಪೊಲೀಸರು ಗಾಂಜಾ ದಂಧೆಯಲ್ಲಿ ಮೂವರನ್ನು ಬಂಧಿಸಿದ್ದು, ಅದರಲ್ಲಿ ಕೈಸರ್ ಪಾಷ ಎಂಬ ಆರೋಪಿ ಮೈಸೂರು ಮೂಲದವನಾಗಿದ್ದಾನೆ.
ಬೆಂಗಳೂರಿನ ಎನ್ಸಿಬಿ ಪೊಲೀಸರು 1 ಕೋಟಿ ಮೌಲ್ಯದ 204 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದು, ಈ ಕೇಸ್ನಲ್ಲಿ ಮೂವರನ್ನು ಬಂಧಿಸಲಾಗಿದೆ. ಅದರಲ್ಲಿ ಮೈಸೂರು ಮೂಲದ ಕೈಸರ್ ಪಾಷ ಕೂಡ ಒಬ್ಬ. ಈತ ಶಾಗಿರ್ದ್ ಎಂದು ಕರೆಯಲ್ಪಡುತ್ತಿದ್ದ. ಕೈಸರ್ ಕಳೆದ ಬಾರಿ ಮೈಸೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಟಿಕೆಟ್ ಪಡೆಯಲು ವಿಫಲನಾಗಿದ್ದ. ಕೊನೆಗೆ ಜೆಡಿಎಸ್ನಿಂದ ಟಿಕೆಟ್ ಪಡೆದು ಶಾಂತಿನಗರ ವಾರ್ಡ್ನಿಂದ ಸ್ಪರ್ಧಿಸಿ 150 ಮತಗಳಿಂದ ಸೋಲನುಭವಿಸಿದ್ದ.