ಮೈಸೂರು:ಗೊಂದಲವನ್ನು ಬಗೆಹರಿಸಿ ಆದಷ್ಟು ಬೇಗ ನಿವಾರಣೆ ಮಾಡಿ, ಇದೇ ವರ್ಷ ಕಬಿನಿ ಜಲಾಶಯದ ಉದ್ಯಾನದ ಕಾಮಗಾರಿ ಆರಂಭಿಸಲಾಗುವುದು. ಪಿಪಿ ಇಲಾಖೆ ಅಥವಾ ಸರ್ಕಾರ ಮಾಡಬೇಕೋ ಎಂಬುದನ್ನು ಆದಷ್ಟು ಬೇಗ ನಿರ್ಧರಿಸಿ ಗೊಂದಲ ನಿವಾರಣೆ ಮಾಡಲಾಗುವುದು. ಈ ವರ್ಷವೇ ಉದ್ಯಾನ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಸಿಎಂ ಇಂದು ಬಾಗಿನ ಅರ್ಪಿಸಿದರು. ಹೆಚ್.ಡಿ. ಕೋಟೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಈ ತಾಲೂಕು ಹಿಂದುಳಿದ ತಾಲೂಕು ಎಂದು ನಾಮಾಂಕಿತ ನಂಜುಂಡಪ್ಪ ವರದಿಯಲ್ಲೂ ಕಂಡಿದೆ. ಆದ್ದರಿಂದ ತಾಲೂಕಿನ ಅಭಿವೃದ್ಧಿಗೆ ವಿಶೇಷವಾದ ಕಾರ್ಯಕ್ರಮಗಳನ್ನು ತರಲಾಗುವುದು. ಶಿಕ್ಷಣ ವಲಯದಲ್ಲಿ ಪ್ರಗತಿ ಸಾಧಿಸಲು ಹೆಚ್ಚು ಗಮನ ನೀಡಲಾಗುವುದು ಎಂದು ಸಿಎಂ ಹೇಳಿದರು.