ಕರ್ನಾಟಕ

karnataka

ETV Bharat / state

ಕಬಿನಿಯಿಂದ ಹರಿದ ಭಾರಿ ಪ್ರಮಾಣದ ನೀರು: ಹೆಚ್​ ಡಿ ಕೋಟೆ- ಗುಂಡ್ಲುಪೇಟೆ ರಸ್ತೆ ಕುಸಿತ, ಜಮೀನುಗಳು ಜಲಾವೃತ - ಎಚ್.ಡಿ.ಕೋಟೆ

ಕಬಿನಿ ಜಲಾಶಯದಿಂದ ನೀರು ಬಿಡುಗಡೆಯಾಗುತ್ತಿದಂತೆಯೇ ಸರಗೂರಿನ ಜಕ್ಕಳ್ಳಿಗೆ ಹೋಗುವ ದಾರಿಮಧ್ಯೆ ಇರುವ ಸೇತುವೆಯ ರಸ್ತೆ ಕುಸಿದಿದ್ದು, ಹೆಚ್.ಡಿ. ಕೋಟೆ-ಗುಂಡ್ಲುಪೇಟೆ ರಸ್ತೆ ಮಾರ್ಗ ಬಂದ್ ಆಗಿದೆ.

ಸೇತುವೆ ರಸ್ತೆ ಕುಸಿತ

By

Published : Aug 8, 2019, 7:32 PM IST

ಮೈಸೂರು:ಕಬಿನಿ ಜಲಾಶಯದಿಂದ 80ಸಾವಿರ ಕ್ಯೂಸೆಕ್ ನೀರು ಹೊರಬಿಡುತ್ತಿದ್ದಂತೆ ಅವಾಂತರ ಸೃಷ್ಟಿಯಾಗಿದ್ದು, ನದಿ ಪಾತ್ರದ ಭಾಗದಲ್ಲಿ ಅಪಾರ ಪ್ರಮಾಣದ ನಷ್ಟ ಉಂಟಾಗುತ್ತಿದೆ.

ಸರಗೂರಿನ ಹ್ಯಾಂಡ್ ಪೋಸ್ಟ್​ನಿಂದ ಜಕ್ಕಳ್ಳಿಗೆ ಹೋಗುವ ದಾರಿ ಮಧ್ಯೆ ಇರುವ ಸೇತುವೆಯ ರಸ್ತೆ ಕುಸಿದ ಪರಿಣಾಮ ಹೆಚ್.ಡಿ. ಕೋಟೆ ಹಾಗೂ ಗುಂಡ್ಲುಪೇಟೆ ಮಾರ್ಗಗಳ‌ ಹಲವು ಹಳ್ಳಿಗಳ‌ ಸಂಚಾರ ಬಂದ್ ಆಗಿದೆ. ಇದರಿಂದ ಹೆಚ್‌. ಡಿ‌. ಕೋಟೆ-ಹೊಮ್ಮರಗಳ್ಳಿ-ಗುಂಡ್ಲುಪೇಟೆ ಹೋಗುವ ಸವಾರರು ಪರದಾಡುವಂತಾಗಿದೆ. ಅಲ್ಲದೇ ಜಮೀನುಗಳು ಜಲಾವೃತವಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ.

ಜಕ್ಕಳ್ಳಿ ಸೇತುವೆಯ ರಸ್ತೆ ಕುಸಿತ

8 ವರ್ಷಗಳ ನಂತ್ರ ಮೈದುಂಬಿದ ತಾರಕ ಜಲಾಶಯ

ವಯನಾಡಿನಲ್ಲಿ ಭಾರಿ ಮಳೆ ಹಿನ್ನೆಲೆ 8 ವರ್ಷಗಳ ನಂತರ ಹೆಚ್.ಡಿ. ಕೋಟೆ ತಾಲೂಕಿನ ಪೆಂಜಳ್ಳಿ ಗ್ರಾಮದಲ್ಲಿರುವ ತಾರಕ ಜಲಾಶಯ ಭರ್ತಿಯಾಗಿದ್ದು,10ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.

ABOUT THE AUTHOR

...view details