ಮೈಸೂರು:ಎಲ್ಲೆಂದರಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳು, ಜೊತೆಗೆ ನೀರಿನ ಖಾಲಿ ಬಾಟಲಿ, ಪ್ಲಾಸ್ಟಿಕ್ ಕಪ್, ಸಿಗರೇಟ್ ಪ್ಯಾಕ್‌ಗಳು...ಇವೆಲ್ಲಾ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಹಿನ್ನೀರಿನ ಜಲಾಶಯದಲ್ಲಿ ಕಂಡುಬಂದ ದೃಶ್ಯಾವಳಿ.
ಕುಡುಕರ ತಾಣವಾದ ಕಬಿನಿ ಹಿನ್ನೀರು ಜಲಾಶಯ: ವಿಡಿಯೋ ನೋಡಿ - drunken-spot
ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಹಿನ್ನೀರಿನ ಜಲಾಶಯದಲ್ಲಿ ಕುಡುಕರು ರಾಜಾರೋಷವಾಗಿ ಕುಡಿದು ಬಾಟಲಿಗಳನ್ನು ಅಲ್ಲಲ್ಲಿ ಬಿಸಾಕಿ ಗಬ್ಬೆಬ್ಬಿಸಿದ್ದಾರೆ.
ಕುಡುಕರು ಮದ್ಯಸೇವಿಸಿ ಬಾಟಲ್ಗಳನ್ನು ನದಿಗೆಸೆದು, ಕಬಿನಿ ಹಿನ್ನೀರಿನ ಪ್ರದೇಶವನ್ನು ಸಂಪೂರ್ಣವಾಗಿ ಮಲಿನಗೊಳಿಸಿದ್ದಾರೆ. ಈ ಕುರಿತು ಸ್ಥಳೀಯರು ಪೊಲೀಸರಿಗೆ ವಿಷಯ ತಲುಪಿಸಿದರೂ ಪ್ರಯೋಜನವಾಗಿಲ್ಲ. ಬೇಜವಾಬ್ದಾರಿ ಕುಡುಕರಿಗೆ ಬಿಸಿ ಮುಟ್ಟಿಸಿ ಇಂಥ ಕೃತ್ಯಗಳಿಗೆ ಕಡಿವಾಣ ಹಾಕಬೇಕಾದ ಪೊಲೀಸರ ಉದಾಸೀನ ಪ್ರವೃತ್ತಿ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಬಾಟಲ್ಗಳನ್ನು ಬಿಸಾಡಿರುವ ಆ ಸ್ಥಳಗಳಲ್ಲಿ ಜಾನುವಾರುಗಳು ಮೇಯಲು ಬರುತ್ತವೆ. ಅವುಗಳ ಕಾಲಿಗೆ ಬಾಟಲಿಗಳ ಚೂರುಗಳು ಚುಚ್ಚಿ ಗಾಯಗೊಳಿಸುತ್ತವೆ. ಅಲ್ಲದೆ, ಸಿಗರೇಟು ಪ್ಯಾಕೆಟ್ಗಳನ್ನು ಅವುಗಳು ಸೇವಿಸುತ್ತವೆ. ಇದು ಜನರ ಓಡಾಟಕ್ಕೂ ತೊಂದರೆಯಾಗುತ್ತಿದೆ. ಪೊಲೀಸರು ಕುಡುಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅನ್ನೋದು ಸಾರ್ವಜನಿಕರ ಒಕ್ಕೊರಳ ಆಗ್ರಹ.