ಮೈಸೂರು: ಜುಬಿಲಿಯಂಟ್ ಕಾರ್ಖಾನೆಯಿಂದ ಕೊರೊನಾ ಯಾವ ರೀತಿ ಹರಡಿದೆ ಎಂಬುವುದರ ಬಗ್ಗೆ ಸೂಕ್ಷ್ಮ ವಿಚಾರವಾಗಿದ್ದು, ಇದರ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.
ಜುಬಿಲಿಯಂಟ್ ಸೂಕ್ಷ್ಮ ವಿಚಾರ, ಕೂಲಂಕಷ ತನಿಖೆಯಾಗ್ತಿದೆ.. ಸಚಿವ ಎಸ್ ಟಿ ಸೋಮಶೇಖರ್ - ST Somashekar
ಜುಬಿಲಿಯಂಟ್ ಕಾರ್ಖಾನೆಗೆ ಕಂಟೈನರ್ ಬಂದಿದ್ದ ಈ ವಿಚಾರ ಐಡಿಂಟಿಫೀಕೇಷನ್ ಮಾಡಿಕೊಂಡು ವಿಚಾರಣೆ ನಡೆಯುತ್ತಿದೆ. ಕಂಟೈನರ್ ವರದಿ ಸೂಕ್ಷ್ಮ ವಿಚಾರವಾಗಿದ್ದು ಎಲ್ಲ ತನಿಖೆಯು ಕೂಲಂಕಷವಾಗಿ ನಡೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಜಿಲ್ಲಾಡಳಿತದಿಂದ ಏರ್ಪಡಿಸಿಸಿದ್ದ ಡಾ.ಬಿ ಆರ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಪ್ರತಿಮೆಗೆ ಮಾರ್ಲಾಪಣೆ ಮಾಡಿ ನಂತರ ಮಾತನಾಡಿದ ಅವರು, ಜುಬಿಲಿಯಂಟ್ ಕಾರ್ಖಾನೆಗೆ ಆಡಿಟರ್ ಬಂದಿದ್ರು ಅಂತಾರೆ, ಕಂಟೈನರ್ ಬಂದಿದ್ದ ಈ ವಿಚಾರ ಐಡಿಂಟಿಫೀಕೇಷನ್ ಮಾಡಿಕೊಂಡು ವಿಚಾರಣೆ ನಡೆಯುತ್ತಿದೆ. ಕಂಟೈನರ್ ವರದಿ ಸೂಕ್ಷ್ಮ ವಿಚಾರ. ಎಲ್ಲಾ ತನಿಖೆಯು ಕೂಲಂಕಷವಾಗಿ ನಡೆಯುತ್ತಿದೆ ಎಂದರು.
ಹರ್ಷಗುಪ್ತ ಅವರನ್ನ ಜುಬಿಲಿಯಂಟ್ ತನಿಖೆಗಾಗಿ ನೇಮಿಸಿಲ್ಲ. ಬೆಂಗಳೂರು ಬಿಟ್ಟರೆ ಮೈಸೂರು ಕೊರೊನಾ ಸೋಂಕಿತರ ಎರಡನೇ ಸ್ಥಾನದಲ್ಲಿದೆ. ಇದರ ಬಗ್ಗೆ ನಿಗಾವಹಿಸಲು ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳನ್ನು ನೇಮಕ ಮಾಡಿದಂತೆ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಎಂದ ಅವರು, ಎಪಿಎಂಸಿ ಆವರಣದಲ್ಲಿ ಕೋಲ್ಡ್ ಸ್ಟೋರೇಜ್ ಇಲ್ಲ ಎಂಬ ಮಾತುಗಳು ಕೇಳಿ ಬಂದಿತ್ತು. ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕೋಲ್ಡ್ ಸ್ಟೋರೇಜ್ ಮಾಡಲು ಟೆಂಡರ್ ಕರೆಯಲಾಗಿದೆ ಎಂದು ಹೇಳಿದರು.