ಮೈಸೂರು: ಆಸ್ಪತ್ರೆಯನ್ನು ಸ್ವಚ್ಛಗೊಳಿಸಲು ಮಾನವ ರಹಿತ ಯಂತ್ರವನ್ನು ಬಳಸುತ್ತಿರುವ ರಾಜ್ಯದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಮೈಸೂರಿನ ಜೆಎಸ್ಎಸ್ ಆಸ್ಪತ್ರೆ ಪಾತ್ರವಾಗಿದೆ. ಆಸ್ಪತ್ರೆ ಸ್ವಚ್ಛತೆಗಾಗಿ ಈ ಯಂತ್ರ ತರಿಸಲಾಗಿದ್ದು, ಮಾನವ ರಹಿತವಾಗಿ ಕಾರ್ಯನಿರ್ವಹಿಸುತ್ತದೆ.
1,800 ಹಾಸಿಗೆ ಸಾಮರ್ಥ್ಯದ ಜೆಎಸ್ಎಸ್ ಆಸ್ಪತ್ರೆ ನಗರದಲ್ಲಿ ಅತ್ಯುತ್ತಮ ಶುಚಿ ಆಸ್ಪತ್ರೆ ಎಂಬ ಗೌರವಕ್ಕೂ ಪಾತ್ರವಾಗಿದೆ. ಡಿಟಿಎಎಸ್ಎಸ್ ಕಂಪನಿಯ ಸಹಯೋಗದೊಂದಿಗೆ ಅತ್ಯಾಧುನಿಕ ಯಂತ್ರವನ್ನು ಸ್ವಚ್ಛತೆಗೆ ತರಿಸಲಾಗಿದ್ದು, ಇಡೀ ಆಸ್ಪತ್ರೆಯ ಶುಚಿ ಕಾರ್ಯ ಮಾಡಲಿದೆ.