ಮೈಸೂರು:ಸಾರಿಗೆ ನೌಕರರ ಮುಷ್ಕರದಿಂದ ಕೃಷಿ ಕ್ಷೇತ್ರದ ಮೇಲೆ ಪರಿಣಾಮ ಬೀರದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಮಹಂತೇಶಪ್ಪ ಹೇಳಿದ್ದಾರೆ.
ತಮ್ಮ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಬ್ಬ ಹರಿದಿನಗಳು ಇರುವುದರಿಂದ ರೈತರು ಹೊರಗಡೆ ಹೋಗದೇ, ಬಹುತೇಕ ತಮ್ಮ ಊರುಗಳಲ್ಲೇ ಇರುತ್ತಾರೆ. ಬಸ್ ಸಂಚಾರ ಇಲ್ಲದ ಹಿನ್ನೆಲೆಯಲ್ಲಿ ರೈತರು ಉಪಯುಕ್ತ ಸಮಯವನ್ನ ಕೃಷಿ ಕ್ಷೇತ್ರದಲ್ಲೇ ಕಳೆಯುತ್ತಿದ್ದಾರೆ. ರೈತರ ಉತ್ಪನ್ನಗಳನ್ನ ಮಾರುಕಟ್ಟೆಗೆ ಸಾಗಿಸಲು ಯಾವುದೇ ಸಮಸ್ಯೆಯಾಗುತ್ತಿಲ್ಲ ಎಂದರು.