ಕರ್ನಾಟಕ

karnataka

ಮೈಸೂರು ಜಿಲ್ಲಾ ಪಂಚಾಯತ್​​ ನೇಮಕಾತಿ; ಕನ್ಸಲ್ಟಂಟ್​ ಹುದ್ದೆಗೆ ಅರ್ಜಿ ಆಹ್ವಾನ

By ETV Bharat Karnataka Team

Published : Nov 25, 2023, 11:25 AM IST

Updated : Nov 25, 2023, 4:59 PM IST

ಮೈಸೂರಿನಲ್ಲಿರುವ ಜಿಲ್ಲಾ ಎಂಐಎಸ್​ ಸಮಾಲೋಚಕರ ಹುದ್ದೆಗೆ ಮತ್ತು ಯಾದಗಿರಿಯಲ್ಲಿರುವ ಗೃಹ ಪಾಲಕಿ ಹುದ್ದೆ ವಿವರ ಇಲ್ಲಿದೆ.

Job notification From Mysore ZP and yadagiri wcd
Job notification From Mysore ZP and yadagiri wcd

ಬೆಂಗಳೂರು: ಮೈಸೂರು ಜಿಲ್ಲಾ ಪಂಚಾಯತ್​ನಿಂದ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಸ್ವಚ್ಛ ಭಾರತ್​ ಮಿಷನ್​ (ಗ್ರಾ) ಯೋಜನೆಯಡಿ ಜಿಲ್ಲಾ ಎಂಐಎಸ್​ ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಹೊರ ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಈ ನೇಮಕಾತಿ ನಡೆಯಲಿದೆ. ಈ ಹುದ್ದೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಹುದ್ದೆ ವಿವರ: ಮೈಸೂರು ಜಿಲ್ಲಾ ಪಂಚಾಯತ್​ ಕಾರ್ಯಾಲಯದಲ್ಲಿರುವ ಜಿಲ್ಲಾ ಎಂಐಎಸ್​ ಸಮಾಲೋಚಕರ ಹುದ್ದೆಗೆ ಭರ್ತಿಗೆ ಅರ್ಜಿ ಆಹ್ವಾನ

ವಿದ್ಯಾರ್ಹತೆ: ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿಇ ಕಂಪ್ಯೂಟರ್​ ಸೈನ್​​/ ಎಂಎಸ್ಸಿ ಕಂಪ್ಯೂಟರ್​ ಸೈನ್​/ ಎಂಎಸ್ಸಿ ಸಂಖ್ಯಾಶಾಸ್ತ್ರದಲ್ಲಿ ಪದವಿಯನ್ನು ಹೊಂದಿರಬೇಕು.

ಅನುಭವ: ಅಭ್ಯರ್ಥಿಗಳು ದತ್ತಾಂಶ ನಿರ್ವಹಣೆ ಹಾಗೂ ದತ್ತಾಂಶ ಸಂಶೋಧನೆಯಲ್ಲಿ ಕನಿಷ್ಠ 3-5 ವರ್ಷ ಅನುಭವ ಹೊಂದಿರಬೇಕು.

ವಯೋಮಿತಿ:ಅಭ್ಯರ್ಥಿಗಳು ಗರಿಷ್ಠ ವಯೋಮಿತಿ 45 ವರ್ಷ ಮೀರಿರಬಾರದು.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿ. ವಯಸ್ಸಿನ ದೃಢೀಕರಣ, ವಿದ್ಯಾರ್ಹತೆ, ಅನುಭವ ಸೇರಿದಂತೆ ಅಗತ್ಯ ಮಾಹಿತಿಯನ್ನು ಆನ್​ಲೈನ್​ನಲ್ಲಿ ಭರ್ತಿ ಮಾಡಬೇಕಿದೆ. ಈ ಹುದ್ದೆಗೆ ಯಾವುದೇ ಅರ್ಜಿ ಶುಲ್ಕವನ್ನು ಭರಿಸಬೇಕಿಲ್ಲ. ಈ ಹುದ್ದೆಗೆ ನವೆಂಬರ್​ 17ರಂದು ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅರ್ಜಿ ಸಲ್ಲಿಕೆ ಕಡೆಯ ದಿನಾಂಕ ನವೆಂಬರ್​ 26 ಆಗಿದೆ.

ಈ ಹುದ್ದೆ ಕುರಿತು ಸಂಪೂರ್ಣ ವಿವರ ಮತ್ತು ಅಧಿಕೃತ ಅಧಿಸೂಚನೆ ಸೇರಿದಂತೆ ಹೆಚ್ಚಿನ ಮಾಹಿತಿಗೆ mysore.nic.inಭೇಟಿ ನೀಡಬಹುದು.

ಯಾದಗಿರಿಯಲ್ಲಿದೆ ಗೃಹ ಪಾಲಕಿ ಹುದ್ದೆ

ಸರ್ಕಾರಿ ಬಾಲಕಿಯರ ಬಾಲ ಮಂದಿರ ಸಂಸ್ಥೆಯಲ್ಲಿ ಖಾಲಿ ಇರುವ ಗೃಹ ಪಾಲಕಿ ಹುದ್ದೆಗೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಹೊರಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಈ ಹುದ್ದೆ ನೇಮಕಾತಿ ನಡೆಸಲಾಗವುದು.

ವಿದ್ಯಾರ್ಹತೆ:ಪಿಯುಸಿ, ಡಿಎಡ್​​ ವಿದ್ಯಾಭ್ಯಾಸ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಕನಿಷ್ಟ ಐದು ವರ್ಷ ಸೇವೆ ಸಲ್ಲಿಸಿದ ಅನುಭವ ಜೊತೆಗೆ ಕಂಪ್ಯೂಟರ್​ ಜ್ಞಾನವನ್ನು ಹೊಂದಿರಬೇಕು.

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 25ರಿಂದ ಗರಿಷ್ಠ 28 ವರ್ಷ ಅನುಭವ ಹೊಂದಿರಬೇಕು.

ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅಭ್ಯರ್ಥಿಗಳು ಆಫ್​​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 100 ರೂ ಡಿಡಿಯನ್ನು ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇಲ್ಲಿಗೆ ಸಲ್ಲಿಸಬೇಕಿದೆ. ಅಭ್ಯರ್ಥಿಗಳು ನಿಗದಿತ ಅರ್ಜಿಯಲ್ಲಿ ತಮ್ಮ ಸ್ವ ವಿವರ, ಶೈಕ್ಷಣಿಕ ದಾಖಲೆ ಸೇರಿದಂತೆ ಅಗತ್ಯ ಪ್ರಮಾಣ ಪತ್ರವನ್ನು ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆ ವಿಳಾಸ: ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೋಣೆ ಸಂಖ್ಯೆ ಸಿ-17, ಒಂದನೇ ಮಹಡಿ, ಜಿಲ್ಲಾ ಆಡಳಿತ ಭವನ ಸಂಕೀರ್ಣ, ಯಾದಗಿರಿ.

ಅರ್ಜಿ ಸಲ್ಲಿಕೆಗೆ ಕಡೆಯ ದಿನ ಡಿಸೆಂಬರ್​ 21 ಆಗಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು ಜಿಲ್ಲಾಡಳಿತದ ವೆಬ್​ಸೈಟ್​ yadgir.nic.in ಇಲ್ಲಿಗೆ ಭೇಟಿ ನೀಡಬೇಕಿದೆ.

ಇದನ್ನೂ ಓದಿ: ಎಸ್​ಬಿಐನಲ್ಲಿ ಸರ್ಕಲ್​ ಬೇಸ್ಡ್​​ ಆಫೀಸರ್ ನೇಮಕಾತಿ: 5,447 ಹುದ್ದೆಗಳಿಗೆ ಅರ್ಜಿ ಆಹ್ವಾನ

Last Updated : Nov 25, 2023, 4:59 PM IST

ABOUT THE AUTHOR

...view details