ಮೈಸೂರು: ನವರಾತ್ರಿಯ ಕೊನೆಯ ಧಾರ್ಮಿಕ ಕಾರ್ಯಕ್ರಮವಾದ ಜವಾರಿ ಮುಡಿ ಉತ್ಸವ ಅದ್ಧೂರಿಯಾಗಿ ನಡೆಸಲಾಯಿತು. ಚಾಮುಂಡಿ ಬೆಟ್ಟದಲ್ಲಿ ತಾಯಿಯ ಉತ್ಸವ ಮೂರ್ತಿಗೆ ರತ್ನ ಖಚಿತ ಅಲಂಕಾರ ಮಾಡಿ ಪೂಜೆ ನೆರವೇರಿಸಲಾಯಿತು. ಆ ಮೂಲಕ ಈ ಬಾರಿಯ ನವರಾತ್ರಿಯ ಧಾರ್ಮಿಕ ಕೈಂಕರ್ಯಗಳಿಗೆ ತೆರೆ ಬಿದ್ದಿತು.
ಕಳೆದ ಸೆಪ್ಟೆಂಬರ್ 26 ರಿಂದ ಚಾಮುಂಡಿ ಬೆಟ್ಟದ ಶರನ್ನವರಾತ್ರಿಯ ಧಾರ್ಮಿಕ ಕೈಂಕರ್ಯಗಳು ಆರಂಭವಾಯಿತು. ಸೆಪ್ಟೆಂಬರ್ 26 ರಂದು ಚಾಮುಂಡಿ ಬೆಟ್ಟದಲ್ಲಿ ಚಿನ್ನದ ಅಂಬಾರಿಯಲ್ಲಿ ಆಸೀನವಾಗುವ ನಾಡದೇವತೆ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾಗೆ ಚಾಲನೆ ನೀಡಲಾಯಿತು.
ಚಾಮುಂಡಿ ಬೆಟ್ಟದಲ್ಲಿ ನೆರವೇರಿದ ಜವಾರಿ ಮುಡಿ ಉತ್ಸವ ಇದನ್ನೂ ಓದಿ:ಚಾಮುಂಡಿ ಬೆಟ್ಟದಲ್ಲಿ ಜರುಗಿದ ಅದ್ಧೂರಿ ತೆಪ್ಪೋತ್ಸವ
ಇದಾದ ಬಳಿಕ 9 ದಿನಗಳು ಚಾಮುಂಡೇಶ್ವರಿಯ ಮೂಲ ಮೂರ್ತಿಗೆ 9 ಅಲಂಕಾರಗಳಲ್ಲಿ ಪೂಜೆ ಸಲ್ಲಿಸಿ ನಂತರ ಚಾಮುಂಡೇಶ್ವರಿಯ ಅದ್ಧೂರಿ ರಥೋತ್ಸವ ನಡೆದ ಬಳಿಕ ದೇವಿ ಕೆರೆಯಲ್ಲಿ ತೆಪ್ಪೋತ್ಸವ ನಡೆಯಿತು. ಆ ಬಳಿಕ ನಿನ್ನೆ ರಾತ್ರಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಮೈಸೂರಿನ ರಾಜ ವಂಶಸ್ಥರು ನೀಡಿದ ಚಿನ್ನ, ಮುತ್ತು, ರತ್ನ, ಪಚ್ಚೆ, ಹವಳ ಸೇರಿದಂತೆ ವಿವಿಧ ಆಭರಣಗಳನ್ನು ಹಾಕಿ ಅದ್ಧೂರಿಯಾಗಿ ಜವಾರಿ ಮುಡಿ ಉತ್ಸವ ನಡೆಸಲಾಯಿತು. ವರ್ಷದಲ್ಲಿ ಒಂದು ಬಾರಿ ಚಾಮುಂಡೇಶ್ವರಿ ಮೂರ್ತಿಗೆ ಎಲ್ಲಾ ಆಭರಣಗಳನ್ನು ಧರಿಸಿ ಉತ್ಸವ ಮಾಡುವುದು ಈ ಜವಾರಿ ಉತ್ಸವದ ವಿಶೇಷ.