ಮೈಸೂರು: ಸದಾ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವ ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ದೈಹಿಕ ಆರೋಗ್ಯದ ಬಗ್ಗೆ ಪಾಠ ಹೇಳಿದರು.
ಮೈಸೂರು ಮೂಲದ ಯುನಿಲಾಗ್ ಕಂಟೆಂಟ್ ಸಲ್ಯೂಷನ್ ಸಾಫ್ಟ್‌ವೇರ್ ಕಂಪನಿಯು ಬೆಂಗಳೂರು, ಮೈಸೂರು, ಲಂಡನ್, ಅಮೆರಿಕಾ ಹಾಗೂ ಆಸ್ಟ್ರೇಲಿಯಾದಲ್ಲಿ ತನ್ನ ಶಾಖೆ ಹೊಂದಿದೆ. ಇದು ಸುಮಾರು 1000ಕ್ಕೂ ಹೆಚ್ಚು ಜನ ಉದ್ಯೋಗಿಗಳನ್ನು ಹೊಂದಿದೆ. ಇಂತಹ ಉದ್ಯೋಗಿಗಳು ವರ್ಷವಿಡೀ ಕಂಪ್ಯೂಟರ್ ಮುಂದೆ ಕುಳಿತಿರುತ್ತಾರೆ.
ಸಾಫ್ಟ್‌ವೇರ್ ಉದ್ಯೋಗಿಗಳಿಗೆ ದೈಹಿಕ ಪಾಠ ಹೇಳಿದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ - undefined
ಐಟಿ ಮಂದಿಗೆ ದೈಹಿಕ ಪಾಠ ಮಾಡಿದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್. ನಗರದ ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ಯುನಿಲಾಗ್ ಕಂಟೆಂಟ್ ಸಲ್ಯೂಷನ್ ಸಾಫ್ಟ್‌ವೇರ್ ಕಂಪನಿಯ ಉದ್ಯೋಗಿಗಳಿಗೆ ಕ್ರೀಡಾಕೂಟ ಆಯೋಜನೆ.

ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್
ಇಂತಹ ಉದ್ಯೋಗಿಗಳಿಗೆ ಪ್ರತಿ ವರ್ಷ ಜುಲೈ ಹಾಗೂ ಆಗಸ್ಟ್ ತಿಂಗಳ ವಾರಾಂತ್ಯದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದ್ದು, ಇಂತಹ ಕ್ರೀಡಾಕೂಟಗಳು ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಎಷ್ಟು ಮುಖ್ಯ ಎಂದು ಈ ಸಂಸ್ಥೆಯ ರಾಯಭಾರಿಯಾದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ನಗರದ ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ತಿಳಿಸಿಕೊಟ್ಟರು.
ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್
ಈ ಎರಡು ತಿಂಗಳ ವಾರ್ಷಿಕ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ಥ್ರೋ ಬಾಲ್, ವಾಲಿಬಾಲ್, ಫುಟ್ಬಾಲ್, ಕ್ರಿಕೆಟ್ ಜೊತೆಗೆ ಒಳಾಂಗಣ ಕ್ರೀಡೆಗಳಾದ ಸ್ನೂಕರ್, ಚೆಸ್, ಶೆಟಲ್, ಬ್ಯಾಡ್ಮಿಂಟನ್ ಹಾಗೂ ಕೇರಂ ಆಡಿಸಲಾಗುತ್ತದೆ.
Last Updated : Jul 15, 2019, 9:22 PM IST