ಮೈಸೂರು:ಅರಮನೆಯ ಸವಾರಿ ತೊಟ್ಟಿಯಲ್ಲಿ ಜಟ್ಟಿ ಕಾಳಗ ಜರುಗಿತು. ಬೆಳಗ್ಗೆ 10.15ಕ್ಕೆ ಆರಂಭವಾಗಬೇಕಿದ್ದ ಕಾಳಗ, 11 ಗಂಟೆಗೆ ತಡವಾಗಿ ಆರಂಭವಾಯಿತು. ಮಹಾರಾಜ ಯಧುವೀರ್ ಸಾಂಪ್ರದಾಯಿಕ ಕುಲದೇವತೆಗಳಿಗೆ ಪೂಜೆ ಸಲ್ಲಿಸಿದ ಬಳಿಕ ಜಟ್ಟಿ ಕಾಳಗದಲ್ಲಿ ಭಾಗಿಯಾದರು.
ಅಖಾಡದಲ್ಲಿ ವಜ್ರ ಮುಷ್ಟಿ ಕಾಳಗ ನಡೆಯಿತು. ಚಾಮರಾಜನಗರ, ಮೈಸೂರು, ಬೆಂಗಳೂರು ಮತ್ತು ಚೆನ್ನಪಟ್ಟಣದಿಂದ ಜಟ್ಟಿಗಳು ಕಾಳಗದಲ್ಲಿ ಭಾಗಿಯಾಗಿದ್ದರು. ಸಾಂಪ್ರದಾಯಿಕ ಪೂಜಾ ಕೈಂಕರ್ಯದ ಬಳಿಕ ವಜ್ರ ಮುಷ್ಟಿ ಕಾಳಗ ನಡೆದಿದ್ದು, ಮಹಾರಾಜ ಯಧುವೀರ್ ಸಮ್ಮುಖದಲ್ಲಿ ಜಟ್ಟಿ ಕಾಳಗ ನಡೆಯಿತು.
ಅರಮನೆಯ ಸವಾರಿ ತೊಟ್ಟಿಯಲ್ಲಿ ನಡೆದ ಜಟ್ಟಿ ಕಾಳಗ ಬನ್ನಿ ಮರಕ್ಕೆ ಪೂಜೆ:ಜಟ್ಟಿ ಕಾಳಗದ ಬಳಿಕ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಪಂಚಲೋಹದ ಪಲ್ಲಕ್ಕಿಗೆ ಯಧುವೀರ್ ಪೂಜೆ ಸಲ್ಲಿಸಿದರು. ಜೈ ಭುವನೇಶ್ವರಿ ದೇವಾಲದ ಬಳಿ ಇರುವ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ, ಬಳಿಕ ಬೆಳ್ಳಿ ಪಲ್ಲಕ್ಕಿಯಲ್ಲಿ ವಾಪಸ್ ಬಂದರು.
ಇದನ್ನೂ ಓದಿ:ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದ ಸಿಎಂ.. ಮೆರವಣಿಗೆಗೆ ಚಾಲನೆ
ಯದುವೀರ್ ವಿಜಯದಶಮಿ ಮೆರವಣಿಗೆ: ಚಿನ್ನದ ಪಲ್ಲಕ್ಕಿಯಲ್ಲಿ ಯುದ್ಧ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡು ಅರಮನೆಯ ಆನೆ ಬಾಗಿಲಿನಿಂದ ಯಧುವೀರ್ ಮೆರವಣಿಗೆಯಲ್ಲಿ ಭುವನೇಶ್ವರಿ ದೇವಸ್ಥಾನಕ್ಕೆ ಬಂದರು. ಮೆರವಣಿಗೆಯ ಮುಂಚೂಣಿಯಲ್ಲಿ ಪಟ್ಟದ ಆನೆಗಳಾದ ಪ್ರೀತಿ, ಚಂಚಲ, ಧನಂಜಯ, ಭೀಮ ಹಾಗೂ ಪಟ್ಟದ ಹಸು, ಪಟ್ಟದ ಕುದುರೆ, ಮಂಗಳ ವಾದ್ಯದೊಂದಿಗೆ ಸಾಗಿದವು.