ಮೈಸೂರು: ಸರ್ಕಾರಿ ವೈದ್ಯರು ಖಾಸಗಿ ಕಂಪನಿ ಹೆಸರಿನ ಔಷಧಿ ಚೀಟಿಗಳನ್ನು ಬರೆದರೆ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮೈಸೂರಿನಲ್ಲಿ ಎಚ್ಚರಿಕೆ ನೀಡಿದ್ದಾರೆ.
ಜನೌಷಧ ದಿನದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಅತೀ ಹೆಚ್ಚು ಜನೌಷಧಿ ಕೇಂದ್ರಗಳನ್ನು ಆರಂಭಿಸಲಾಗುವುದು. ಇತ್ತೀಚಿಗೆ ಜನೌಷಧಿ ಕೇಂದ್ರಗಳಿಗೆ ವೈದ್ಯರು ಔಷಧಿ ಚೀಟಿಗಳನ್ನು ಬರೆಯುತ್ತಿಲ್ಲ. ಇದರಿಂದ ಜನೌಷಧಿ ಬಗ್ಗೆ ಜನರಲ್ಲಿ ಅರಿವು ಮೂಡುತ್ತಿಲ್ಲ. ಆದರೆ ಇನ್ನು ಮುಂದೆ ಈ ರೀತಿ ಆಗಲು ಬಿಡುವುದಿಲ್ಲ. ಯಾರಾದರು ಸರ್ಕಾರಿ ವೈದ್ಯರು ಖಾಸಗಿ ಕಂಪನಿ ಹೆಸರಿನ ಔಷಧಿ ಬರೆದರೆ ಕ್ರಮ ಕೈಗೊಳ್ಳಲಾಗುವುದು ಎಂದರು.