ಮೈಸೂರು : ಜನತಾ ಕರ್ಫ್ಯೂ ವಿಧಿಸಿರುವ ಹಿನ್ನೆಲೆ ಜಿಲ್ಲೆಯಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಮದುವೆಗಳಲ್ಲಿ ಕೂಡ ಜನರಿಲ್ಲದೆ ಸರಳವಾಗಿ ನೆರೆವೇರುತ್ತಿವೆ.
ಜನತಾ ಕರ್ಫ್ಯೂ.. ಸರಳ ವಿವಾಹಕ್ಕೆ ಮೊರೆ - ಸರಳ ವಿವಾಹಕ್ಕೆ ಮೊರೆ
ಅಗ್ರಹಾರ ವೃತ್ತದ ಬಳಿ ಇರುವ ವಿದ್ವಾನ್ ಪೂರ್ಣಯ್ಯ ಸ್ಮಾರಕ ಭವನ, ಯಶಸ್ವಿನಿ ಕಲ್ಯಾಣ ಮಂಟಪ ಸೇರಿ ಹಲವು ಕಲ್ಯಾಣ ಮಂಟಪಗಳಲ್ಲಿ ಮದುವೆ ನಿಗದಿಯಾಗಿದ್ದವು.
ಸರಳ ವಿವಾಹಕ್ಕೆ ಮೊರೆ
ಅಗ್ರಹಾರ ವೃತ್ತದ ಬಳಿ ಇರುವ ವಿದ್ವಾನ್ ಪೂರ್ಣಯ್ಯ ಸ್ಮಾರಕ ಭವನ, ಯಶಸ್ವಿನಿ ಕಲ್ಯಾಣ ಮಂಟಪ ಸೇರಿ ಹಲವು ಕಲ್ಯಾಣ ಮಂಟಪಗಳಲ್ಲಿ ಮದುವೆ ನಿಗದಿಯಾಗಿದ್ದವು. ಆದರೆ, ಜನತಾ ಕರ್ಫ್ಯೂ ಇರುವ ಹಿನ್ನೆಲೆ ಮದುವೆಯಲ್ಲಿ ಜನರಿಲ್ಲದೇ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ನೆರವೇರಿದೆ. ಅಲ್ಲದೇ ಮದುವೆ ಮನೆಗಳಲ್ಲಿ ಕುಟುಂಬಸ್ಥರಿಗಷ್ಟೇ ಅಡುಗೆ ಮಾಡಿಸಿ ಆಹಾರ ವ್ಯರ್ಥ ಕೂಡ ತಪ್ಪಿಸಲಾಗಿದೆ.