ಕರ್ನಾಟಕ

karnataka

ETV Bharat / state

ದಸರಾ ಆನೆಗಳಿಗೆ ಮರಳು ಮೂಟೆ ತಾಲೀಮು: ಇಲ್ಲಿದೆ ಇಂಟ್ರಸ್ಟಿಂಗ್​ ವಿಷ್ಯಾ! - ದಸರಾ ಜಂಬೂ ಸವಾರಿ

ಮೈಸೂರು ದಸರಾ ಜಂಬು ಸವಾರಿಗೆ ಸರ್ವ ಸಿದ್ಧತೆಗಳನ್ನು ಮಾಡಲಾಗುತ್ತಿದ್ದು, ಜನಾಕರ್ಷಣೆಯ ಜಂಬು ಸವಾರಿಗೆ ಅರ್ಜುನನ ತಂಡಕ್ಕೆ ಇಂದಿನಿಂದ ತಾಲೀಮು ನೀಡಲಾಗುತ್ತಿದೆ.

ಸರಾ ಜಂಬು ಸವಾರಿಗೆ ಸರ್ವ ಸಿದ್ಧತೆ

By

Published : Sep 7, 2019, 6:50 AM IST

ಮೈಸೂರು: ದಸರಾ ಜಂಬೂ ಸವಾರಿಯ ದಿನ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಸಾಗುವ ಅರ್ಜುನನಿಗೆ ಶುಕ್ರವಾರದಿಂದ 350 ಕೆಜಿ ತೂಕದ ಮರಳು ಮೂಟೆಯನ್ನು ಹೊರಿಸಿ ಮರಳಿನ ತಾಲೀಮು ಆರಂಭಿಸಲಾಗಿದೆ.

ಆನೆಗಳ ವೈದ್ಯ ನಾಗರಾಜ್

ಹೀಗೆ ಹಂತ ಹಂತವಾಗಿ ಮರಳಿನ ತಾಲೀಮು ಮಾಡಿಸುತ್ತ ಭಾರ ಹೆಚ್ಚಿಸಲಾಗುತ್ತದೆ.

ನಂತರ 750 ಕೆಜಿ ತೂಕದ ಮರದ ಅಂಬಾರಿಯ ತಾಲೀಮಿನ ಮೇಲೆ ತರಬೇತಿ ನೀಡಲಾಗುತ್ತದೆ. ಈ ತಾಲೀಮನ್ನು ದಸರಾದಲ್ಲಿ ಭಾಗವಹಿಸುವ ಅರ್ಜುನ, ಅಭಿಮನ್ಯು, ಧನಂಜಯ ಹಾಗೂ ಈಶ್ವರ ಆನೆಗಳಿಗೆ ಮಾಡಿಸಲಾಗುತ್ತದೆ ಎಂದು ಆನೆ ವೈದ್ಯ ನಾಗರಾಜ್ ಹೇಳಿದರು.

ತಾಲೀಮು ಹೇಗಿರುತ್ತೆ: ಅರಮನೆಯ ಒಳಗೆ ಕೋಟೆ ಸೋಮೇಶ್ವರ ದೇವಾಲಯದ ಆವರಣದಲ್ಲಿ ಬಿಡಾರ ಹೂಡಿರುವ ದಸರಾ ಗಜಪಡೆಯ, ಮೊದಲ‌ ತಂಡದ ಕ್ಯಾಪ್ಟನ್ ಅರ್ಜುನ ನೇತೃತ್ವದ ಆನೆಗಳನ್ನು ನಿತ್ಯ ಬೆಳಗ್ಗೆ 8 ಗಂಟೆಗೆ ಅರಮನೆಯಿಂದ ಬನ್ನಿಮಂಟಪದವರೆಗೆ ಇರುವ ಸುಮಾರು 5 ಕಿಲೋಮೀಟರ್ ದೂರವನ್ನು 2 ಗಂಟೆ ಸಮಯದಲ್ಲಿ ಕ್ರಮಿಸಿ ವಾಪಸ್ ಬರುತ್ತದೆ.

ಗಜಪಡೆ ಅರಮನೆ ಕೋಟೆ ಆಂಜನೇಯ ದ್ವಾರದ ಬಳಿ ಬಂದ ನಂತರ ಆಂಜನೇಯನಿಗೆ ಸೊಂಡಿಲನ್ನು ಎತ್ತಿ ನಮಸ್ಕರಿಸುವ ಅರ್ಜುನ, ನಂತರ ಕೆ.ಆರ್ ವೃತ್ತದ ಬಳಿ ಬಂದ ಸಂದರ್ಭದಲ್ಲಿ ನಿಂತು ಮಾವುತನಿಗೆ ಸೊಂಡಿಲಿನ ಮೂಲಕ ಕಬ್ಬು ನೀಡುವಂತೆ ಕೇಳುತ್ತಾನೆ.

ನಂತರ ಕಬ್ಬು ತಿಂದು ಸಾಗುವ ಅರ್ಜುನ ಕೆ.ಆರ್.ಮಾರ್ಕೆಟ್ ಬಳಿ ಜನರು ಹೂ ನೀಡುತ್ತಾರೆ.‌ ಹೂ ಹಾಕಿಕೊಂಡು ರಾಜ ಗಾಂಭಿರ್ಯದಿಂದ ಜನರು ಹಾಗೂ ವಾಹನಗಳ ಮಧ್ಯೆ ಭಾರ ಹೊತ್ತು ಹೆಜ್ಜೆ ಹಾಕುವ ಗಜಪಡೆಯನ್ನು ನೋಡಲು ಜನರು ಸಾಲುಗಟ್ಟಿ ರಸ್ತೆಯ ಎರಡೂ ಭಾಗಗಳಲ್ಲೂ ನಿಂತಿರುತ್ತಾರೆ.

ABOUT THE AUTHOR

...view details