ಮೈಸೂರು:ಅರಮನೆ ಒಳಗಿನಿಂದ ಸಂಜೆ 4ಗಂಟೆಯಿಂದ ಅಂಬಾರಿ ಹೊತ್ತ ಆನೆ ಮೆರವಣಿಗೆ ಹೊರಡಲಿದೆ. ಈ ಜಂಬೂ ಸವಾರಿಯ ವೀಕ್ಷಣೆಗೆ ಈಗಾಗಲೇ ಸಾವಿರಾರು ಜನ ತೆರಳುತ್ತಿದಾರೆ. ಪೊಲೀಸರು ಪ್ರೇಕ್ಷಕರನ್ನ ಸರತಿಯಲ್ಲಿ ಬಿಡುತ್ತಿದ್ದಾರೆ. ಒಳಪ್ರವೇಶಿಸಲು ಜನ ಹರಸಾಹಸ ನಡೆಸಿದ್ದಾರೆ.
ಜಂಬೂಸವಾರಿ ವೀಕ್ಷಣೆಗೆ ಹರಿದು ಬರುತ್ತಿರುವ ಜನಸಾಗರ.. - ಮೈಸೂರು ದಸರಾ-2019
ಅರಮನೆ ಒಳಗಿನಿಂದ ಸಂಜೆ 4 ಗಂಟೆಯಿಂದ ಅಂಬಾರಿ ಹೊರಡಲಿದೆ. ಇದರ ವೀಕ್ಷಣೆಗೆ ತೆರಳಲು ಜನ ಪ್ರಯತ್ನಿಸುತ್ತಿದ್ದು, ಪೊಲೀಸರು ಇವರನ್ನು ಸಾಲಿನಲ್ಲಿ ಬಿಡುತ್ತಿದ್ದಾರೆ. ಒಳಪ್ರವೇಶಿಸಲು ಜನ ಹರಸಾಹಸ ನಡೆಸಿದ್ದಾರೆ.
ಜಂಬೂಸವಾರಿವೀಕ್ಷಣೆಗೆ ಹರಿದು ಬರುತ್ತಿರುವ ಜನಸಾಗರ
ದಸರಾ ವಿಜಯ ದಶಮಿ ಸಂದರ್ಭದಲ್ಲಿ ಅರಮನೆ ಒಳಭಾಗ ನಡೆಯುವ ಕಾರ್ಯಕ್ರಮಗಳ ವೀಕ್ಷಣೆಗೆ ಅಪಾರ ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದಾರೆ. ಅರಮನೆ ಬಹುತೇಕ ಜನರಿಂದಲೇ ತುಂಬಿದೆ.
ಪಾಸ್ ಹೊಂದಿದವರಿಗೆ ಮಾತ್ರ ಪ್ರವೇಶಿಸಲು ಅವಕಾಶವಿರುವ ಪ್ರವೇಶದ್ವಾರಗಳು ಕೆಲವಿದ್ದರೆ, ಇನ್ನೂ ಕೆಲ ಪ್ರವೇಶದ್ವಾರಗಳು ಸಾರ್ವಜನಿಕರ ಪ್ರವೇಶಕ್ಕೆ ಮಾತ್ರ ಮುಕ್ತವಾಗಿವೆ. ಸಾರ್ವಜನಿಕ ಪ್ರವೇಶಕ್ಕೆ ಮುಕ್ತರಾಗಿರುವ ಮಾರ್ಗಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಾಗರಿಕರು ಆಗಮಿಸಿದ್ದು ಒಳಹೋಗಲು ಶತ ಪ್ರಯತ್ನ ನಡೆಸಿದ್ದಾರೆ. ಸಂಚಾರ ದಟ್ಟಣೆ ಆಗದಂತೆ ನೋಡಿಕೊಳ್ಳಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.