ಮೈಸೂರು: ಕಳೆದ ವರ್ಷ ಬಹುರೂಪಿ ನಾಟಕೋತ್ಸವಕ್ಕೆ ವೆಂಟಿಲೇಷನ್ ಹಾಕಿಕೊಂಡು ಬಂದಿದ್ದ ಕಾರ್ನಾಡ್, ತಮ್ಮ ಭಾಷಣದಲ್ಲಿ ಇದು ನನ್ನ ಕೊನೆಯ ಕಾರ್ಯಕ್ರಮ ಎಂದು ಹೇಳಿದ್ದರು.
ಮೈಸೂರಿನ ರಂಗಾಯಣಕ್ಕೂ ಗೀರಿಶ್ ಕಾರ್ನಾಡ್ಗೂ ಅವಿನಾಭಾವ ಸಂಬಂಧ. 1989ರಲ್ಲಿ ಮೈಸೂರಿನ ರಂಗಾಯಣ ಜನ್ಮ ತಾಳಿದ ದಿನದಿಂದಲೂ ರಂಗಾಯಣದೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಇವರು, ಕಾರಂತರ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದ್ದರು.
ವೆಂಟಿಲೇಷನ್ ಹಾಕಿಕೊಂಡೇ ಭಾಷಣ! ಕಳೆದ ವರ್ಷ ಬಹುರೂಪಿ ನಾಟಕೋತ್ಸವ ಸಂದರ್ಭದಲ್ಲಿ ವಲಸೆ ನಾಟಕದ ಉದ್ಘಾಟನೆಗೆ ಬಂದಿದ್ದ ಗಿರೀಶ್ ಕಾರ್ನಾಡ್, ಮೂಗಿಗೆ ವೆಂಟಿಲೇಷನ್ ಹಾಕಿಕೊಂಡು ಬಂದು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ್ದರು. ಆ ಕಾರ್ಯಕ್ರಮದ ಸಂದರ್ಭದಲ್ಲಿ ಇದು ನನ್ನ ಕೊನೆಯ ಕಾರ್ಯಕ್ರಮ ಎಂದು ಹೇಳಿದ್ದರು.
ರಂಗಾಯಣದ ಜೊತೆಗೆ ಕಾರ್ನಾಡ್ ಅವರ ಬಾಂಧವ್ಯ ಉತ್ತಮವಾಗಿತ್ತು. ಅನಾರೋಗ್ಯದ ನಡುವೆಯೂ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಿದ್ದು ರಂಗಾಯಣದ ಮೇಲೆ ಅವರ ಪ್ರೀತಿ ಎಷ್ಟಿತ್ತು ಎಂಬುದನ್ನು ತಿಳಿಸುತ್ತದೆ.