ಮೈಸೂರು : ಐಟಿ ದಾಳಿ ಕುರಿತುಸಚಿವ ಸಿ.ಎಸ್ ಪುಟ್ಟುರಾಜು ಪ್ರತಿಕ್ರಿಯಿಸಿದ್ದಾರೆ. ತಮ್ಮ ಹಾಗೂ ತಮ್ಮ ಸಂಬಂಧಿಕರ ಮನೆಗಳ ಮೇಲೆ ನಡೆದ ಐಟಿ ದಾಳಿಯ ಕುರಿತು ಸಚಿವರು ಆಕ್ರೋಶ ಹೊರಹಾಕಿದ್ದಾರೆ.
ಇದು ಐಟಿ ದಾಳಿಯಲ್ಲ ಐಟಿ ರಾಜಕೀಯ: ಸಚಿವ ಸಿ.ಎಸ್. ಪುಟ್ಟರಾಜು
ತಮ್ಮ ಮೇಲೆ ನಡೆದಿರುವುದು ಐಟಿ ದಾಳಿಯಲ್ಲ, ಐಟಿ ರಾಜಕೀಯ. ನಾನು ಅಕ್ರಮ ಮಾಡಿರೋ ದಾಖಲಾತಿ ತೋರಿಸಿದ್ರೇ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಸಚಿವ ಪುಟ್ಟರಾಜು ಹೇಳಿದ್ದಾರೆ.
ತೆರಿಗೆ ಅಧಿಕಾರಿಗಳನ್ನ ಬಿಜೆಪಿ ನಾಯಕರು ನಮ್ಮ ಮನೆಗೆ ಕಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. ಬಿಜೆಪಿ ಬೆಂಬಲಿತರು ಪಕ್ಷದ ಟವಲ್ ಹಾಕಿಕೊಂಡು ಫೋಟೋ ತೆಗೆದಿದ್ದಾರೆ. ನಿಜವಾದ ರಾಜಕೀಯ ಇವತ್ತಿಂದ ಆರಂಭವಾಗುತ್ತೆ. ಸಮ್ಮಿಶ್ರ ಸರ್ಕಾರದ ಮೇಲೆ ಬಿಜೆಪಿ ಕಣ್ಣಿಟ್ಟಿದೆ ಎಂದರು.
ಇನ್ನು ದಿ. ಅನಂತ್ ಕುಮಾರ್ ಕುಟುಂಬವನ್ನ ನಾಶ ಮಾಡಿದ್ದಲ್ಲದೆ ಅವರ ಪತ್ನಿಗೆ ಟಿಕೆಟ್ ಕೊಡದೇ ಬಿಜೆಪಿ ಮೋಸ ಮಾಡಿದೆ ಎಂದು ಗಂಭೀರ ಆರೋಪವನ್ನು ಪುಟ್ಟರಾಜು ಮಾಡಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಪಕ್ಷದವರ ಮೇಲೆ ದ್ವೇಷ ಮಾಡ್ತಾರೆ. ಬಿಜೆಪಿಯವರಿಗೆ ನಾಚಿಕೆ ಆಗಬೇಕು. ಇದು ಐಟಿ ದಾಳಿಯಲ್ಲ ಐಟಿ ರಾಜಕೀಯ. ನಾನು ಅಕ್ರಮ ಮಾಡಿರೋ ದಾಖಲಾತಿ ತೋರಿಸಿದ್ರೇ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಪುಟ್ಟರಾಜು ಗುಡುಗಿದ್ದಾರೆ.