ಮೈಸೂರು: ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಿಕೊಂಡು ಐಟಿ,ಇಡಿ ದಾಳಿ ಮಾಡಲಾಗುತ್ತಿದೆ ಎಂಬುದು ಆಧಾರರಹಿತ ಆರೋಪ. ಈ ಬಗ್ಗೆ ಪ್ರತಿಕ್ರಿಯೆ ನೀಡುವುದೇ ವ್ಯರ್ಥ ಎಂದು ಕೇಂದ್ರ ಸಚಿವ ಡಾ.ಹರ್ಷವರ್ಧನ್ ಮೈಸೂರಿನಲ್ಲಿ ಹೇಳಿದ್ರು.
ರಾಜಕೀಯ ವಿರೋಧಿಗಳ ಗುರಿಯಾಗಿಸಿ ಐಟಿ,ಇಡಿ ದಾಳಿ ಆರೋಪ: ಪ್ರತಿಕ್ರಿಯೆ ವ್ಯರ್ಥವೆಂದ ಕೇಂದ್ರ ಸಚಿವ - ಕಲ್ಕತ್ತಾದಲ್ಲಿ ಭಾರತೀಯ ಅಂತಾರಾಷ್ಟ್ರೀಯ ವಿಜ್ಞಾನ ಮೇಳ
ದೇಶದಲ್ಲಿ ರಾಜಕೀಯ ವಿರೋಧಿಗಳ ಗುರಿಯಾಗಿಸಿಕೊಂಡು ಐಟಿ, ಇಡಿ ದಾಳಿ ನಡೆಸಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡೋದೇ ವ್ಯರ್ಥ ಎಂದು ಕೇಂದ್ರ ಸಚಿವ ಹರ್ಷವರ್ಧನ್ ಹೇಳಿದ್ರು.
ನವೆಂಬರ್ 5 ರಿಂದ 8 ರವರೆಗೆ ಕಲ್ಕತ್ತಾದಲ್ಲಿ ನಡೆಯುವ 5ನೇ ಭಾರತೀಯ ಅಂತಾರಾಷ್ಟ್ರೀಯ ವಿಜ್ಞಾನ ಮೇಳದ ಬಗ್ಗೆ ಮಾಹಿತಿ ನೀಡಲು ಸಿ.ಎಫ್.ಟಿ.ಆರ್.ಐ ಸಭಾಂಗಣದಲ್ಲಿ ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ ಸಚಿವ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಹರ್ಷವರ್ಧನ್ ಸುದ್ದಿಗೋಷ್ಠಿ ನಡೆಸಿದ್ರು.
ಈ ಬಾರಿ ಕಲ್ಕತ್ತಾದಲ್ಲಿ ನಡೆಯುವ ವಿಜ್ಞಾನ ಮೇಳಕ್ಕೆ ದೇಶ ವಿದೇಶಗಳಿಂದ ಸುಮಾರು 12 ಸಾವಿರ ಪ್ರತಿನಿಧಿಗಳು ಭಾಗವಹಿಸಲಿದ್ದು, ಈ ಸಮ್ಮೇಳನದಲ್ಲಿ 1500 ಯುವ ವಿದ್ಯಾರ್ಥಿ ವಿಜ್ಞಾನಿಗಳನ್ನು ಆಯ್ಕೆ ಮಾಡಲಾಗಿದ್ದು, ಸಮ್ಮೇಳನದಲ್ಲಿ 28 ಪ್ರಮುಖ ಗೋಷ್ಠಿಗಳು ನಡೆಯಲಿವೆ. ಇದಕ್ಕಾಗಿ ಕಲ್ಕತ್ತಾದ ವಿಜ್ಞಾನ ಗ್ರಾಮ ನಿರ್ಮಾಣವಾಗಿದೆ ಎಂದು ತಿಳಿಸಿದ್ರು. ಈ ವಿಜ್ಞಾನ ಮೇಳದಲ್ಲಿ ಗ್ರಾಮಾಂತರ ಮಟ್ಟಕ್ಕೂ ತಂತ್ರಜ್ಞಾನ ವಿಜ್ಞಾನವನ್ನು ತಲುಪಿಸುವ ಉದ್ದೇಶ ಹೊಂದಿದೆ ಎಂದ ಕೇಂದ್ರ ಸಚಿವರು, ದೇಶದ ಎಲ್ಲಾ ಜನರಿಗೂ ಆರೋಗ್ಯ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ನೂತನವಾಗಿ 157 ಮೆಡಿಕಲ್ ಕಾಲೇಜ್ಗಳನ್ನ ಸ್ಥಾಪಿಸಲು ಈಗಾಗಲೇ ನಿರ್ಧರಿಸಿದ್ದೇವೆ ಎಂದು ತಿಳಿಸಿದ್ರು.