ಕರ್ನಾಟಕ

karnataka

ETV Bharat / state

ಪುಂಡಾಟ ತೋರಿದ ಈಶ್ವರನನ್ನು ಕಾಡಿಗೆ ಕಳಿಸಲು ನಿರ್ಧಾರ - ಈಶ್ವರನನ್ನು ಕಾಡಿಗೆ ಕಳುಹಿಸಲು ಕ್ರಮ

ಈ ಬಾರಿ ನಡೆಯಲಿರುವ ದಸರಾ ನಾಡ ಹಬ್ಬಕ್ಕೆ ದುಬಾರೆ ಆನೆ ಶಿಬಿರದಿಂದ ಆಗಮಿಸಿದ್ದ ಈಶ್ವರ ಆನೆಯನ್ನು ಮತ್ತೆ ಕಾಡಿಗೆ ಕಳುಹಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಈಶ್ವರ ಆನೆಯನ್ನು ಮತ್ತೆ ಕಾಡಿಗೆ ಕಳುಹಿಸಲು ಅಧಿಕಾರಿಗಳ ನಿರ್ಧಾರ

By

Published : Sep 10, 2019, 6:42 PM IST

ಮೈಸೂರು:ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಕಾರಿನ ಗಾಜು ಪುಡಿ ಮಾಡಿದನೆಂದು ರೋಹಿತ್ ಎಂಬ ಆನೆಯನ್ನು ಎರಡನೇ ತಂಡದ ಗಜಪಡೆಯಿಂದ ಕೈ ಬಿಡಲಾಯಿತು. ಅದರ ಬೆನ್ನೆಲ್ಲೇ ಮೊದಲ ತಂಡದೊಂದಿಗೆ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಹೊಸ ಆನೆ ಈಶ್ವರ ಕೂಡ ಔಟ್ ಆಗಿದ್ದಾನೆ.

ಐದು ವರ್ಷಗಳ ಹಿಂದೆ ಹಾಸನ ಜಿಲ್ಲೆಯ‌ ಸಕಲೇಶಪುರದ ನಾಗವಾರಹಳ್ಳಿಯಲ್ಲಿ ಜನರಿಗೆ ಸಾಕಷ್ಟು ತೊಂದರೆ ಕೊಡುತ್ತಿದ್ದ. ಸಂಜೆ ಆಗುತ್ತಿದ್ದಂತೆ ಸಾರ್ವಜನಿಕರು ತಿರುಗಾಡದಂತೆ ಹವಾ ಕ್ರಿಯೇಟ್ ಮಾಡಿದ್ದ. ಹೆದರಿಸಲು ಹೋದರೆ ಉಪಟಳ ಕೊಡುತ್ತಿದ್ದ ಈಶ್ವರನನ್ನು ಅರಣ್ಯ ಇಲಾಖೆ ಸಾಕಾನೆಗಳ ಸಹಾಯದಿಂದ ಸೆರೆ ಹಿಡಿದು ಸಾಕಾನೆಗಳ ಜೊತೆ ಕಳುಹಿಸಿಕೊಟ್ಟಿತ್ತು.

ಈಶ್ವರ ಆನೆಯನ್ನು ಮತ್ತೆ ಕಾಡಿಗೆ ಕಳುಹಿಸಲು ಅಧಿಕಾರಿಗಳ ನಿರ್ಧಾರ

ಕೊಡಗು ಜಿಲ್ಲೆಯ ದುಬಾರೆ ಆನೆ ಶಿಬಿರಕ್ಕೆ ಸಾಕಾನೆಗಳ ಸಹಾಯದಿಂದ ಕರೆದುಕೊಂಡು ಬಂದ ಈ ಪುಂಡ 'ಈಶ್ವರ'ನಿಗೆ ನಾಮಕರಣ ಮಾಡಿ 6 ತಿಂಗಳು ಕ್ರಾಲ್ (ಆನೆ ಪಳಗಿಸುವ ಸ್ಥಳ) ನಲ್ಲಿ ಇಟ್ಟು ಸಾಕಾನೆಗಳಿಂದ ನೀತಿ ಪಾಠ ಮಾಡಿಸಲಾಯಿತು. ನಂತರ ದುಬಾರೆಯಲ್ಲಿ 'ಈಶ್ವರ' ಸಾಕಾನೆಗಳಂತೆ ತನ್ನ ಹಾವಭಾವ ತೋರಿದ್ದಾನೆ.‌

ಆದರೆ, ಸೋಮವಾರ ಮದವೇರಿ‌ದ ಈಶ್ವರ ಹಾಗೂ ಧನಂಜಯನ ಕಾದಾಟವನ್ನು ನೋಡಿ ಕೆಲವರು ಆತಂಕಗೊಂಡಿದ್ದರು. ಎರಡು ಆನೆಗಳನ್ನು ಮಾವುತರು ಸಮಾಧಾನ‌ ಪಡಿಸಿದ್ದರು. ಆದರೆ ವಾತಾವರಣಕ್ಕೆ ಹೊಂದಿಕೊಳ್ಳದೇ ಇರುವುದರಿಂದ ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಲಕ್ಷಾಂತರ ಮಂದಿ ಸೇರುತ್ತಾರೆ. ಈಶ್ವರ ಆನೆ ಏನಾದರು ಮಾಡಿದರೆ ಕಷ್ಟವಾಗಲಿದೆ ಎಂಬ ಆಲೋಚನೆಯಿಂದ ಮತ್ತೆ ಈಶ್ವರನನ್ನು ಕಾಡಿಗೆ ಕಳುಹಿಸಲು ಅಧಿಕಾರಿಗಳು ಕ್ರಮ ತೆಗೆದುಕೊಂಡಿದ್ದಾರೆ.

ABOUT THE AUTHOR

...view details