ಮೈಸೂರು: ಬಿ.ಎಸ್. ಯಡಿಯೂರಪ್ಪನ ಕೈಯಿಂದಲೇ ಕೇಂದ್ರದಿಂದ ಪರಿಹಾರ ತರಲು ಆಗಲಿಲ್ಲ. ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತರ್ತಾರ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದರು.
ಬಿಎಸ್ವೈ ಕೈಯಲ್ಲೇ ಆಗ್ಲಿಲ್ಲ, ಬೊಮ್ಮಾಯಿಯಿಂದ ಪರಿಹಾರ ತರಲು ಸಾಧ್ಯವೇ? ಸಿದ್ದರಾಮಯ್ಯ ಲೇವಡಿ
ಮಾಜಿ ಸಿಎಂ ಯಡಿಯೂರಪ್ಪ ಕೈಯಲ್ಲೇ ಕೇಂದ್ರದಿಂದ ರಾಜ್ಯಕ್ಕೆ ನಿರೀಕ್ಷಿತ ಪರಿಹಾರ ತರಲು ಆಗ್ಲಿಲ್ಲ. ಇನ್ನು ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ತರ್ತಾರಾ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ
ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಭೀತಿ ಶುರುವಾಗಿದೆ. ನೆರೆ ಹಾವಳಿ ಕೂಡ ಹೆಚ್ಚಾಗಿದೆ. ಇದನ್ನ ಬೊಮ್ಮಾಯಿ ನಿಭಾಯಿಸುವ ವಿಶ್ವಾಸವಿಲ್ಲ ಎಂದರು. ಅಧಿಕಾರಿಗಳು ನೆರೆ ಹಾವಳಿಯನ್ನ ನಿಭಾಯಿಸುತ್ತಾರೆ. ಅಧಿಕಾರಿಗಳನ್ನ ಸಿಎಂ ವಿಶ್ವಾಸಕ್ಕೆ ಪಡೆದು ಕೆಲಸ ಮಾಡಬೇಕು ಎಂದು ಹೇಳಿದ್ರು.
ಏಕವ್ಯಕ್ತಿ ಸಂಪುಟದಿಂದ ಇವೆಲ್ಲವನ್ನ ನಿರ್ವಹಿಸಲು ಸಾಧ್ಯವಿಲ್ಲ. ಆದಷ್ಟು ಬೇಗ ಸಂಪುಟ ರಚನೆಯನ್ನೂ ಮಾಡಬೇಕು ಎಂದು ಒತ್ತಾಯಿಸಿದರು.