ಮೈಸೂರು: ನಟಿ ರಾಖಿ ಸಾವಂತ್ ಪತಿ ಆದಿಲ್ ಖಾನ್ ದುರಾನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇರಾನ್ ದೇಶದಿಂದ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದ ವಿದ್ಯಾರ್ಥಿನಿಯೊಬ್ಬರು ಈತನ ವಿರುದ್ಧ ಅತ್ಯಾಚಾರ, ವಂಚನೆ, ಬೆದರಿಕೆ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನನ್ವಯ ಮೈಸೂರಿನ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ದೂರಿನ ವಿವರ: ಮೈಸೂರಿನಲ್ಲಿ ಡಾಕ್ಟರ್ ಆಫ್ ಫಾರ್ಮಸಿ ಮಾಡಲು ಬಂದಿದ್ದು ಕಳೆದ 5 ವರ್ಷಗಳಿಂದ ಆದಿಲ್ ಖಾನ್ ದುರಾನಿ ಪರಿಚಯ. ಮದುವೆ ಆಗುವುದಾಗಿ ನಂಬಿಸಿ ವಿ.ವಿ ಪುರಂನಲ್ಲಿರುವ ಅಪಾರ್ಟ್ಮೆಂಟ್ವೊಂದರಲ್ಲಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಇತ್ತೀಚೆಗೆ 5 ತಿಂಗಳಿನಿಂದ ಮದುವೆ ವಿಚಾರದಲ್ಲಿ ಮಾತು ತಪ್ಪಿದ್ದಾನೆ. ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದರೆ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸಿ ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ವಿದ್ಯಾರ್ಥಿನಿ ದೂರು ಸಲ್ಲಿಸಿದ್ದಾರೆ.
ಪತಿ ವಿರುದ್ಧ ದೂರು ನೀಡಿದ್ದ ರಾಖಿ:ಈ ಹಿಂದೆ, ಪತಿ ಆದಿಲ್ ಖಾನ್ ದುರಾನಿ ವಿರುದ್ಧ ಮಹಾರಾಷ್ಟ್ರದ ಓಶಿವಾರ ಪೊಲೀಸ್ ಠಾಣೆಯಲ್ಲಿ ರಾಖಿ ಸಾವಂತ್ ದೂರು ದಾಖಲಿಸಿದ್ದರು. ಈ ಸಂಬಂಧ ಆದಿಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ತಾಯಿಯ ಚಿಕಿತ್ಸೆಗೂ ಪತಿ ದುಡ್ಡು ನೀಡಿಲ್ಲವೆಂದು ರಾಖಿ ಆರೋಪಿಸಿದ್ದರು.
ಇದನ್ನೂ ಓದಿ:ಮೈಸೂರಿನ ಆದಿಲ್ ಜೊತೆ ರಾಖಿ ಸಾವಂತ್ ಶಾದಿ: ಇಸ್ಲಾಂಗೆ ಮತಾಂತರವಾಗಿ 'ಪಾತಿಮಾ' ಹೆಸರು