ಮೈಸೂರು: ಅಂತರ್ ರಾಜ್ಯ ಇಬ್ಬರು ದರೋಡೆಕೋರರನ್ನು ಬಂಧಿಸಿ ಅವರಿಂದ 1.50 ಲಕ್ಷ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆಂಧ್ರ ಪ್ರದೇಶ ಮೂಲದ ಚಿತ್ತೂರು ಜಿಲ್ಲೆಯ ಕುಪ್ಪಂ ಗ್ರಾಮದ ನಿವಾಸಿಗಳಾದ ರಾಜೇಶ್(28), ಷಣ್ಮುಗಂ(52) ಬಂಧಿತ ದರೋಡೆಕೋರರು. ವಿಜಯನಗರದ ನಿವಾಸಿ ರಾಜು ಎಂಬುವವರು 2018ರ ನವೆಂಬರ್ 14ರಂದು ಶಿವರಾಂಪೇಟೆ ವಿನೋಬ ರಸ್ತೆಯಲ್ಲಿರುವ ಕರೂರು ವೈಶ್ಯಾ ಬ್ಯಾಂಕಿನಿಂದ 2 ಲಕ್ಷ ರೂ. ಹಣ ಡ್ರಾ ಮಾಡಿಕೊಂಡು ತಮ್ಮ ಕಾರಿನ ಬಳಿ ಹೋಗಲು ರಸ್ತೆ ದಾಟುತ್ತಿದ್ದರು. ಆಗ ಬೈಕ್‍ನಲ್ಲಿ ಬಂದ ಇವರು ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರು. ಈ ಸಂಬಂಧ ರಾಜು ಅವರು ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.