ಮೈಸೂರು: ಬೆಂಗಳೂರಿನ ಡಿ.ಜೆ.ಹಳ್ಳಿಯಲ್ಲಿ ಗಲಭೆ ಪ್ರಕರಣದಿಂದ ರಾಜ್ಯದಲ್ಲಿ ಗುಪ್ತಚರ ಇಲಾಖೆ ತುಂಬಾ ವೀಕ್ ಆಗಿದೆ ಎಂಬುಂದು ತಿಳಿಯುತ್ತದೆ ಎಂದು ಶಾಸಕ ತನ್ವೀರ್ ಸೇಠ್ ಕಿಡಿ ಕಾರಿದ್ದಾರೆ.
ಬೆಂಗಳೂರು ಗಲಭೆಗೆ ಗುಪ್ತಚರ ಇಲಾಖೆ ವೈಫಲ್ಯ ಕಾರಣ: ತನ್ವೀರ್ ಸೇಠ್ - Intelligence department
ಇಂಟೆಲಿಜೆನ್ಸಿ ಬಹಳ ಜವಾಬ್ದಾರಿಯುತವಾದ ಇಲಾಖೆ. ಈ ಇಲಾಖೆ ವೈಫಲ್ಯದಿಂದ ಬೆಂಗಳೂರಿನಲ್ಲಿ ಶಾಂತಿ ಕದಡಿದೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಮುಂದೆ ಏನಾಗುತ್ತೆ ಅಂತ ಗುಪ್ತಚರ ಇಲಾಖೆಗೆ ಗೊತ್ತಿರಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ಮಾಡುವುದರಿಂದ ಪ್ರಾಣ ಹಾನಿ ಆಗುತ್ತೆ. ಮೊದಲು ನಾವು ಶಾಂತಿ ಕಾಪಾಡಿಕೊಳ್ಳೋಣ, ಗಲಭೆ ಸಂಬಂಧ ಎಲ್ಲಿ ವೈಫಲ್ಯಗಳು ಆಗಿವೆ ಅನ್ನೋದನ್ನ ತನಿಖೆ ಮಾಡಲು ಸರ್ಕಾರವನ್ನ ಒತ್ತಾಯಿಸುತ್ತೇನೆ. ರಾಮ ಮಂದಿರ ಭೂಮಿ ಪೂಜೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕೋಮು ಗಲಭೆ ಪ್ರಚೋದಿತ ಪೋಸ್ಟ್‌ಗಳನ್ನು ಹಾಕಲಾಗುತ್ತಿದೆ.ಇತ್ತೀಚೆಗೆ ಇದರಿಂದ ಕೆಟ್ಟ ಸಂಸ್ಕೃತಿ ಬೆಳೆಯುತ್ತಿದೆ. ಆಳುವ ಸರ್ಕಾರಗಳು ಉದ್ಯೋಗ ಸೃಷ್ಠಿ ಮಾಡಬೇಕು, ದುಡಿಯುವ ಕೈಗಳಿಗೆ ಕೆಲಸ ನೀಡಿದಾಗ ಇಂತಹ ಘಟನೆಗಳನ್ನ ತಡೆಯಬಹುದು.
ಯುವಕರು ಶಾಂತಿ ಕಾಪಾಡಬೇಕು.1986 ರಲ್ಲಿ ಮೈಸೂರಲ್ಲಿ ಇಂತಹ ಹೇಳಿಕೆಯಿಂದ ಶಾಂತಿ ಕದಡಿತ್ತು.ಹೀಗಾಗಿ ಪೊಲೀಸ್, ಗುಪ್ತಚರ ಇಲಾಖೆ ಮತ್ತಷ್ಟು ಎಚ್ಚರಿಕೆವಹಿಸಬೇಕಾಗುತ್ತೆ.ಗಲಭೆ ಸಂಬಂಧ ಅಖಂಡ ಶ್ರೀನಿವಾಸ್ ಮೂರ್ತಿ ಈಗಾಗಲೇ ಕ್ಷಮೆ ಕೇಳಿದ್ದಾರೆ. ಗಲಭೆಗೆ ಸಂಬಂಧಿಸಿದ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಆಗಲೇಬೇಕು ಎಂದಿದ್ದಾರೆ.