ಕರ್ನಾಟಕ

karnataka

ETV Bharat / state

ರಾತ್ರಿ ಕರ್ಫ್ಯೂ ಜಾರಿ: ರೈಲ್ವೆ ಮುಂಗಡ ಟಿಕೆಟ್ ಸಮಯ ಬದಲು..! - Aparna Garg, Divisional Railway Manager, South Western Railway

ರೈಲ್ವೆ ಮುಂಗಡ ಬುಕಿಂಗ್​​​ ಅನ್ನು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಇಂದಿನಿಂದ ವೇಳೆಯನ್ನು ಬದಲಾವಣೆ ಮಾಡಲಾಗಿದೆ. ಈ ಕುರಿತು ಡಿ.ಆರ್.ಎಂ ಅರ್ಪಣ ಗರ್ಗ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

Instead of railway advance ticket time
ರೈಲ್ವೆ ಮುಂಗಡ ಟಿಕೆಟ್ ಸಮಯ ಬದಲು

By

Published : Jun 29, 2020, 5:35 PM IST

ಮೈಸೂರು: ಕೊರೊನಾ ಹರಡುವುದನ್ನು ತಡೆಗಟ್ಟಲು ರಾಜ್ಯದಲ್ಲಿ ರಾತ್ರಿ ವೇಳೆ ಕರ್ಫ್ಯೂ ಜಾರಿಯಾಗಿರುವ ಹಿನ್ನೆಲೆ, ರೈಲ್ವೆ ಟಿಕೆಟ್ ಬುಕಿಂಗ್ ಮಾಡುವ ವೇಳೆಯನ್ನು ಬದಲಿಸಲಾಗಿದೆ.

ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ, ಪ್ರತಿದಿನ ರಾತ್ರಿ 8 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿದೆ. ಈ ಹಿನ್ನೆಲೆ ರೈಲ್ವೆ ಮುಂಗಡ ಬುಕಿಂಗ್ ಅ​​​ನ್ನು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಇಂದಿನಿಂದ ವೇಳೆಯನ್ನು ಬದಲಾವಣೆ ಮಾಡಲಾಗಿದೆ.

ನೈರುತ್ಯ ರೈಲ್ವೆ ವಿಭಾಗದಲ್ಲಿ ಬರುವ ಮೈಸೂರು, ಶಿವಮೊಗ್ಗ , ದಾವಣಗೆರೆ, ಹಾಸನ ಮತ್ತು ಅರಸೀಕೆರೆ ರೈಲ್ವೆ ನಿಲ್ದಾಣದಲ್ಲಿ ಇದು ಇಂದಿನಿಂದ ಜಾರಿಯಲ್ಲಿ ಇರುತ್ತದೆ ಎಂದು ಡಿ.ಆರ್.ಎಂ ಅರ್ಪಣ ಗರ್ಗ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ABOUT THE AUTHOR

...view details