ಕರ್ನಾಟಕ

karnataka

ETV Bharat / state

ಭಾರತ ಜಿ20ಶೃಂಗಸಭೆಯ ದೊಡ್ಡ ಜವಾಬ್ದಾರಿ ಹೊತ್ತಿದೆ: ಗೀತಾ ಗೋಪಿನಾಥ್ - JSS college mysuru

ಭಾರತದ ಪಾಲಿಗೆ ಜಿ20ಶೃಂಗಸಭೆ ಮಹತ್ವದ ಸಭೆಯಾಗಿದೆ - ಪ್ರಪಂಚದ ದುರ್ಬಲ ದೇಶಗಳಿಗೂ ಸಮಾನ ಶಿಕ್ಷಣ ಸಿಗಬೇಕು - ಭಾರತದ ಉದ್ಯಮ ಕ್ಷೇತ್ರದಲ್ಲಿ ಮಹಿಳೆಯr ಭಾಗವಹಿಸುವಿಕೆ ಅತ್ಯಂತ ಕಡಿಮೆ- ಗೀತಾ ಗೋಪಿನಾಥ.

india-bears-major-responsibility-for-g20-summit-geeta-gopinath
ಭಾರತ ಜಿ20ಶೃಂಗಸಭೆಯ ದೊಡ್ಡ ಜವಾಬ್ದಾರಿ ಹೊತ್ತಿದೆ: ಗೀತಾ ಗೋಪಿನಾಥ್

By

Published : Mar 5, 2023, 5:17 PM IST

ಮೈಸೂರು: ಭಾರತವು ಜಿ20 ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವ ಮೂಲಕ ದೊಡ್ಡ ಜವಾಬ್ದಾರಿ ಹೊತ್ತಿಕೊಂಡಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ಉಪ ವ್ಯವಸ್ಥಾಪಕ ನಿರ್ದೇಶಕಿ ಡಾ. ಗೀತಾ ಗೋಪಿನಾಥ್ ಹೇಳಿದರು.

ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಆಯೋಜಿದ್ದ ಪದವೀಧರರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ಪ್ರಪಂಚದ ಶೇ 80 ರಷ್ಟು ಜಿಡಿಪಿ ಹೊಂದಿರುವ 20 ದೇಶಗಳು ಶೃಂಗಸಭೆಯಲ್ಲಿ ಭಾಗವಹಿಸಲಿವೆ. ಆಹಾರ, ಸೈಬರ್ ಭದ್ರತೆ, ಭಯೋತ್ಪಾದನೆ, ಇಂತಹ ಅನೇಕ ಸಮಸ್ಯೆಗಳ ಬಗ್ಗೆ ಅಲ್ಲಿ ಚರ್ಚೆ ನಡೆಯಲಿದ್ದು, ಭಾರತದ ಪಾಲಿಗೆ ಇದು ಮಹತ್ವದ ಸಭೆಯಾಗಿದೆ ಎಂದು ಹೇಳಿದರು.

ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಆಯೋಜಿದ್ದ ಪದವೀಧರರ ದಿನಾಚರಣೆ

ದುರ್ಬಲ ದೇಶಗಳಿಗೂ ಸಮಾನ ಶಿಕ್ಷಣ ಸಿಗಬೇಕು: ಜಗತ್ತಿನಲ್ಲಿ ನಡೆಯುತ್ತಿರುವ ತಲ್ಲಣಗಳನ್ನು ತೆರೆದ ಮನಸ್ಸಿನಿಂದ ಎಲ್ಲರೂ ಆಲಿಸಬೇಕು. ಪ್ರಪಂಚ ಇಂದು ಮತ್ತಷ್ಟು ಜಟೀಲವಾಗುತ್ತಿದೆ. ಪ್ರಪಂಚದ ದುರ್ಬಲ ದೇಶಗಳಿಗೂ ಸಮಾನ ಶಿಕ್ಷಣ ಸಿಗುವಂತಾಗಬೇಕು. ಆಗ ಮಾತ್ರ ಸರ್ವರ ಅಭಿವೃದ್ಧಿ ಸಾಧ್ಯ. ದೇಶದ ಬೆಳವಣಿಗೆ ಯುವಕರ ಪಾತ್ರವೂ ಕೂಡ ಮುಖ್ಯವಾಗಿದೆ. ಪ್ರಪಂಚದ ದುರ್ಬಲ ದೇಶಗಳನ್ನು ಅಭಿವೃದ್ಧಿಪಡಿಸಿದರೆ ಮಾತ್ರ ಎಲ್ಲಾ ಬೆಳವಣಿಗೆ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಕೊರೊನಾ ಹಾವಳಿಯಿಂದ ಪ್ರಪಂಚದ ಬಹುತೇಕ ರಾಷ್ಟ್ರಗಳು ಸಂಕಷ್ಟಕ್ಕೆ ಒಳಗಾದವು. ಅಲ್ಲದೇ, ಸೂಕ್ತ ಸಮಯಕ್ಕೆ ಕೋವಿಡ್ ಲಸಿಕೆ ಸಿಗದೆ ಅನೇಕರು ಸಾಕಷ್ಟು ಕಷ್ಟ ಅನುಭವಿಸಿದರು. ಕೆಲವು ದೇಶಗಳಲ್ಲಿ ಒಂದು ಡೋಸ್ ಲಸಿಕೆ ಪೂರೈಸಿದರೆ, ಮತ್ತೆ ಕೆಲವು ದೇಶಗಳಲ್ಲಿ ಒಂದು ಡೋಸ್ ಲಸಿಕೆಗೂ ಪರದಾಡುವ ಸ್ಥಿತಿ ಎದುರಾಯಿತು. ಇಂತಹ ಅನೇಕ ಸವಾಲುಗಳನ್ನು ಎದುರಿಸಿ ವಿಶ್ವ ಸಂಸ್ಥೆ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಸಂಸ್ಥೆಗಳು ಹಾಗೂ ಹಲವು ದೇಶಗಳು ಉತ್ತಮ ಕೆಲಸ ಮಾಡಿವೆ. ಎಲ್ಲಾ ದೇಶಗಳಿಂದ ಕೋವಿಡ್ ಕಣ್ಮರೆಯಾಗುವ ವರೆಗೂ ಕೋವಿಡ್ ಕಾಲ ಮುಗಿದಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

ಇದನ್ನೂ ಓದಿ:ಪಿಯು ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ: 1 ಅಂಕದ 20 ಬಹುಮಾದರಿಯ ಪ್ರಶ್ನೆಗೆ ಆದ್ಯತೆ

ಮಹಿಳೆಯರು ಉದ್ಯೋಗ ಕ್ಷೇತ್ರದ ಕಡೆ ಗಮನ ಕೊಡಬೇಕು : ಪ್ರಪಂಚದ ಇತರೆ ದೇಶಗಳಿಗೆ ಹೊಲಿಕೆ ಮಾಡಿದರೆ ಭಾರತದ ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆ ಅತ್ಯಂತ ಕಡಿಮೆ ಇದೆ. ನಾರಿಯರು ಉದ್ಯೋಗ ಕ್ಷೇತ್ರದ ಕಡೆ ಗಮನ ನೀಡಬೇಕು ಎಂದು ಸಲಹೆ ನೀಡಿದರು. ಈ ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿಜಿ ಬೆಟಸೂರುಮಠ, ಜೆಎಸ್​ಎಸ್​ ಕಾಲೇಜಿನ ಪ್ರಾಂಶುಪಾಲ ಡಾ. ಹೆಚ್​.ಬಿ. ಸುರೇಶ್, ಡೀನ್ ಡಾ. ರೇಚಣ್ಣ, ಪರೀಕ್ಷಾ ನಿಯಂತ್ರಣಾಧಿಕಾರಿ ಎಂ.ಎಂ ಸ್ವಾಮಿ ಉಪಸ್ಥಿತರಿದ್ದರು.

ಅಂತಾರಾಷ್ಟ್ರೀಯ ಹಣಕಾಸು ನಿಧಿ ಎಂಬ ಪ್ರತಿಷ್ಠಿತ ಹಣಕಾಸು ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆಯಾಗಿರುವ ಗೀತಾ ಗೋಪಿನಾಥ್​ ಅವರು ಮೂಲತಃ ಸಾಂಸ್ಕೃತಿಕ ನಗರಿ ಮೈಸೂರಿನವರು.

ಇದನ್ನೂ ಓದಿ:ಚಾಮುಂಡಿ ಬೆಟ್ಟದಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ ಆರಂಭ: ಸಾರ್ವಜನಿಕರು ಭಾಗವಹಿಸುವಂತೆ ಮನವಿ

ABOUT THE AUTHOR

...view details