ಮೈಸೂರು: ಮದ್ಯದ ಅಮಲಿನಲ್ಲಿ ಸ್ಥಳೀಯರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಬೆಂಗಳೂರು ಮೂಲದ ಯವಕರಿಗೆ ಸ್ಥಳೀಯರು ಧರ್ಮದೇಟು ನೀಡಿ ಕಾರನ್ನು ಜಖಂಗೊಳಿಸಿರುವ ಘಟನೆ ಹೆಚ್.ಡಿ. ಕೋಟೆ ತಾಲೂಕಿನ ಚಿಕ್ಕದೇವಿರಮ್ಮ ಬೆಟ್ಟದ ತಪ್ಪಲಿನಲ್ಲಿರುವ ಹಾಲ್ಗಡದಲ್ಲಿ ನಡೆದಿದೆ.
ಹೆಚ್.ಡಿ. ಕೋಟೆ ತಾಲೂಕಿನ ಚಿಕ್ಕದೇವಿರಮ್ಮ ಬೆಟ್ಟದಲ್ಲಿ ಪೂಜೆಗೆ ಬೆಂಗಳೂರಿನಿಂದ ಕಾರಿನಲ್ಲಿ ಬಂದಿದ್ದ ಯುವಕರ ಗುಂಪು ಪೂಜೆ ಮುಗಿಸಿಕೊಂಡು ಬೆಟ್ಟದ ತಪ್ಪಲಿನಲ್ಲಿರುವ ಹಾಲ್ಗಡದಲ್ಲಿಮದ್ಯ ಸೇವಿಸಿಊಟ ಮಾಡಿದ್ದರು. ಈ ವೇಳೆ ಅಲ್ಲಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಸಿಟ್ಟಿಗೆದ್ದ ಜನರು ಯುವಕರು ತಂದಿದ್ದ ಕಾರನ್ನು ಜಖಂಗೊಳಿಸಿ ಧರ್ಮದೇಟು ನೀಡಿದ್ದಾರೆ.