ಕರ್ನಾಟಕ

karnataka

ETV Bharat / state

ಮೈಸೂರು ಅರಮನೆಗೆ ತೆರಿಗೆಯಲ್ಲಿ ಡಿಸ್ಕೌಂಟ್​... ಆಡಳಿತ ಮಂಡಳಿ ಮನವಿಗೆ ಓಕೆ ಎಂದು ಐಟಿ ಇಲಾಖೆ - news kannada

ಯಾವುದೇ ವಾಣಿಜ್ಯ ‌ಚಟುವಟಿಕೆಗಳನ್ನು ನಡೆಸದ ಕಾರಣ ಮೈಸೂರು ಅರಮನೆಯ ಆಡಳಿತ ಮಂಡಳಿಗೆ ಪತ್ರ ಬರೆದಿರುವ ಕೇಂದ್ರ ಸರ್ಕಾರದ ಆದಾಯ ಇಲಾಖೆಯು 2023-24 ವರಗೆ ತೆರಿಗೆ ವಿನಾಯಿತಿ ನೀಡಿದೆ.

ಮೈಸೂರು ಅರಮನೆ

By

Published : Apr 25, 2019, 4:41 PM IST

ಮೈಸೂರು: ಅರಮನೆಯ ಆಡಳಿತ ಮಂಡಳಿಗೆ ತೆರಿಗೆ ವಿನಾಯಿತಿ ನೀಡಬೇಕೆಂಬ ಕೋರಿಕೆಗೆ ಸರ್ಕಾರ ಸ್ಪಂಧಿಸಿದ್ದು, ಓಕೆ ಎಂದು ಹೇಳಿದೆ.

ವಿಶ್ವವಿಖ್ಯಾತ ಮೈಸೂರು ಅರಮನೆಯ ಆಡಳಿತ ಮಂಡಳಿ ತೆರಿಗೆ ಪಾವತಿಸಬೇಕೆಂದು ಆದಾಯ ತೆರಿಗೆ ಇಲಾಖೆ ಕಳೆದ ಜುಲೈನಲ್ಲಿ ನೋಟಿಸ್​ ನೀಡಿತ್ತು. ಆದರೆ, ಈ ನೋಟಿಸ್​ಗೆ ಉತ್ತರ ನೀಡಿದ ಅರಮನೆಯ ಆಡಳಿತ ಮಂಡಳಿಯ ಅಧ್ಯಕ್ಷರು ಆಗಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್​ ಅರಮನೆ ಆಡಳಿತ ಮಂಡಳಿ ಯಾವುದೇ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿಲ್ಲ, ಜೊತೆಗೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಂಜೆ ಸಮಯದಲ್ಲಿ ಇರುವ ದೀಪಾಲಂಕಾರ ವೀಕ್ಷಣೆ ಮಾಡಲು ಯಾವುದೇ ಪ್ರವೇಶ ಶುಲ್ಕವನ್ನು ವಿಧಿಸುವುದಿಲ್ಲ.

ವಿಶ್ವವಿಖ್ಯಾತ ಮೈಸೂರು ಅರಮನೆ

ಆದ್ದರಿಂದ ಆದಾಯ ತೆರಿಗೆ ಇಲಾಖೆ ಕಾಯ್ದೆ 1961ರ ಪ್ರಕಾರ, 10(46)ರ ಅನ್ವಯ ತೆರಿಗೆ ವಿನಾಯಿತಿ ನೀಡುವಂತೆ ಕೇಳಿದ್ದರು. ಇದರನ್ವಯ 2023-24 ವರಗೆ ತೆರಿಗೆ ವಿನಾಯಿತಿ ನೀಡಿ ಕೇಂದ್ರ ಸರ್ಕಾರದ ಆದಾಯ ಇಲಾಖೆಯು ಅರಮನೆ ಆಡಳಿತ ಮಂಡಳಿಗೆ ಪತ್ರ ಬರೆದು ತಿಳಿಸಿದೆ.

ABOUT THE AUTHOR

...view details