ಮೈಸೂರು: ರಸ್ತೆಯ ದುರಸ್ತಿ ಸಂಬಂಧ ಜನರು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಂಜನಗೂಡು ತಾಲೂಕಿನ ಶ್ರೀ ಕಂಠೇಶ್ವರ ಸ್ವಾಮಿ ದೇವಸ್ಥಾನದ ಬಳಿಯಿರುವ ಬಜಾರ್ ರಸ್ತೆಯಲ್ಲಿ ನಡೆದಿದೆ.
ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಶ್ರೀ ಕಂಠೇಶ್ವರ ದೇವಸ್ಥಾನದ ಬಳಿಯಿರುವ ಬಜಾರ್ ರಸ್ತೆ ತೀರಾ ಹದಗೆಟ್ಟಿದೆ. ಇನ್ನು 1 ತಿಂಗಳಲ್ಲಿ ನಂಜುಂಡೇಶ್ವರನ ದೊಡ್ಡ ಜಾತ್ರೆ ಇದೆ, ಹಾಗಾಗಿ ರಸ್ತೆಯನ್ನು ಸರಿಪಡಿಸಬೇಕೆಂದು ಆಗ್ರಹಿಸಿ ಸಾರ್ವಜನಿಕರು ಅಧಿಕಾರಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ರಸ್ತೆ ಸರಿಪಡಿಸುವಂತೆ ಆಗ್ರಹಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದ ಸಾರ್ವಜನಿಕರು ಬಜಾರ್ನಲ್ಲಿ ವ್ಯಾಪಾರಸ್ಥರು, ಸಾರ್ವಜನಿಕರು, ಆ ರಸ್ತೆಯಲ್ಲಿ ಓಡಾಡುವವರು ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿ, ಮೂರು ತಿಂಗಳಿನಿಂದ ಜೆಸಿಬಿ ಮೂಲಕ ರಸ್ತೆಯನ್ನು ಬಗೆದು ಗುಂಡಿಮಾಡಿ ಹಾಳುಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾರ್ವಜನಿಕರು ಮನವಿಪತ್ರವನ್ನು ಸಹ ನೀಡಿದರೂ ಸಹಾ ಯಾವುದೇ ಪ್ರಯೋಜನವಾಗಿಲ್ಲ.
ಒಂದು ತಿಂಗಳಲ್ಲಿ ನಂಜುಂಡೇಶ್ವರನ ದೊಡ್ಡ ಜಾತ್ರೆ ಬರುವುದು. ಈ ರಸ್ತೆ ಬಗೆದು ಮೂರು ತಿಂಗಳು ಆಗಿದೆ. ಈ ರಸ್ತೆಯಲ್ಲಿ ಚರಂಡಿ ಇರುವುದರಿಂದ ಸಮಸ್ಯೆಯಾಗಿದೆ. ದಯವಿಟ್ಟು ರಸ್ತೆ ಕಾಮಗಾರಿ ಕೆಲಸವನ್ನು ಪೂರ್ಣ ಮಾಡಿ ಎಂದು ಪೂಜಾರಿ ವೆಂಕಟೇಶ ಮನವಿ ಮಾಡಿಕೊಂಡರು.
ಈ ರಸ್ತೆಯ ವ್ಯಾಪಾರಸ್ಥರಾಗಿರುವ ಫ್ರಾನ್ಸಿಸ್ ಮಾತನಾಡಿ, ಇಲ್ಲಿ ಚರಂಡಿ ಇರುವುದರಿಂದ ಸೊಳ್ಳೆಗಳು ಬಾಳ ಇವೆ. ಇದರಿಂದ ಆರೋಗ್ಯ ಹಾಳಾಗುವುದಲ್ಲದೇ ವ್ಯಾಪಾರಕ್ಕೆ ತೊಂದರೆಯಾಗುತ್ತದೆ. ಆದಷ್ಟು ಬೇಗ ರಸ್ತೆ ಸರಿಪಡಿಸಿ ಎಂದು ಆಗ್ರಹಿಸಿದ್ರು.