ಮೈಸೂರು: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂಬ ಶಂಕೆ ಮೇರೆಗೆ ನಂಜನಗೂಡು ಪೊಲೀಸರು ಅಕ್ಕಿ ಸಮೇತ ಲಾರಿಯನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
ಪಡಿತರ ಅಕ್ಕಿ ಅಕ್ರಮ ಸಾಗಾಟ ಶಂಕೆ: ಲಾರಿ ಸಮೇತ ಚಾಲಕ ಪೊಲೀಸರ ವಶ - Nanjangud police
ಜನರಿಗೆ ಹಂಚಿಕೆ ಮಾಡಲು ತಂದಿದ್ದ 500 ಅಕ್ಕಿ ಮೂಟೆಗಳನ್ನು ಅಕ್ರಮವಾಗಿ ಕೇರಳ ರಾಜ್ಯಕ್ಕೆ ಸಾಗಿಸುತ್ತಿದ್ದಾರೆ ಎಂಬ ದೂರಿನ ಮೇರೆಗೆ ದಾಳಿ ಮಾಡಿದ ನಂಜನಗೂಡು ಪೊಲೀಸರು, ಅಕ್ಕಿ ಸಮೇತ ಲಾರಿಯನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಪಡಿತರ ಅಕ್ಕಿ ಅಕ್ರಮ ಸಾಗಾಟ: ಡ್ರೈವರ್, ಲಾರಿ ಪೊಲೀಸರ ವಶ
ಜನರಿಗೆ ಹಂಚಿಕೆ ಮಾಡಲು ತಂದಿದ್ದ 500 ಅಕ್ಕಿ ಮೂಟೆಗಳನ್ನು ಅಕ್ರಮವಾಗಿ ಕೇರಳ ರಾಜ್ಯಕ್ಕೆ ಸಾಗಿಸುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ನಂಜನಗೂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಖಚಿತ ಮಾಹಿತಿ ಮೇರೆಗೆ ಲಾರಿಯು ನಂಜನಗೂಡಿನ ಬಳಿ ಹೋಗುತ್ತಿದ್ದಾಗ ಪೊಲೀಸರು, ಲಾರಿ ಹಾಗೂ ಡ್ರೈವರ್ ನಿಜರುದ್ದೀನ್ ಎಂಬುವವನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
ಪಡಿತರ ಅಕ್ಕಿ ಎಲ್ಲಿಂದ ಬಂತು? ಎಲ್ಲಿಗೆ ಸಾಗಿಸಲಾಗುತ್ತಿದೆ? ಎಂಬುದರ ಬಗ್ಗೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ತನಿಖೆ ಕೈಗೊಂಡಿದ್ದಾರೆ.