ಮೈಸೂರು:ಆಂಧ್ರಪ್ರದೇಶದಿಂದ ಕೇರಳ ರಾಜ್ಯಕ್ಕೆ ಬೆಂಗಳೂರು - ಮೈಸೂರು- ನಂಜನಗೂಡು ರಸ್ತೆ ಮಾರ್ಗವಾಗಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, 86 ಕೆಜಿ 300 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಅಕ್ರಮ ಗಾಂಜಾ ಸಾಗಣೆ : ನಾಲ್ವರ ಬಂಧನ - ಮೈಸೂರು ಪ್ರಮುಖ ಸುದ್ದಿ
ಅಕ್ರಮವಾಗಿ ಗಾಂಜಾ ಸಾಗಣೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಮೈಸೂರಿನಲ್ಲಿ ಪೊಲೀಸರು ಬಂಧಿಸಿ, 86 ಕೆಜಿ 300 ಗ್ರಾಂ ಗಾಂಜಾ ಮತ್ತು ಬೊಲೆರೋ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದ ಆರೋಪಿಗಳು ಮಹಮ್ಮದ್ (42), ಸಲೀಂ (30), ಶಫಿ (28) ಹಾಗೂ ಇಬ್ರಾಹಿಂ ಕುಟ್ಟಿ (32) ಇವರು ಬೊಲೆರೋ ವಾಹನದಲ್ಲಿ ಆಂಧ್ರ ಪ್ರದೇಶದಿಂದ ಕೇರಳಕ್ಕೆ ಮೈಸೂರಿನ ಮೂಲಕ ಗಾಂಜಾ ಸಾಗಿಸುತ್ತಿದ್ದರು. ಮೈಸೂರಿನ ಏರ್‌ಪೋರ್ಟ್ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆಯಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದು, ಬಂಧಿತರೆಲ್ಲರೂ ಕೇರಳ ಮೂಲದವರಾಗಿದ್ದಾರೆ.
ಇವರಿಂದ 86 ಕೆಜಿ 300 ಗ್ರಾಂ ಗಾಂಜಾ ಮತ್ತು ಬೊಲೆರೋ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇವರ ವಿರುದ್ಧ ಮೈಸೂರು ಜಿಲ್ಲಾ ಸೆಸ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.