ಮೈಸೂರು:ನಾದಸ್ವರದಡೊಳ್ಳಿನೊಳಗೆ ಅಕ್ರಮ ಮದ್ಯ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ಜಾಗೃತ ದಳದವರು ವಶಕ್ಕೆ ಪಡೆದಿದ್ದಾರೆ.
ನಾದಸ್ವರದ ಡೊಳ್ಳಿನಲ್ಲಿ ಮದ್ಯ ಸಾಗಾಟ: ಇಬ್ಬರು ವಶಕ್ಕೆ - ಮದ್ಯ ಸಾಗಾಟ
ಎಚ್.ಡಿ.ಕೋಟೆ ತಾಲೂಕಿನ ಉದ್ಬೂರು ಚೆಕ್ ಪೋಸ್ಟ್ ಬಳಿ ಅಕ್ರಮವಾಗಿ ನಾದಸ್ವರದ ಡೊಳ್ಳಿನಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಅಕ್ರಮ ಮದ್ಯ ಸಾಗಾಟ
ಅಕ್ರಮವಾಗಿ ಡೋಲ್ನಲ್ಲಿ ಮದ್ಯ ಸಾಗಣೆ
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿ ಎಚ್.ಡಿ.ಕೋಟೆ ತಾಲೂಕಿನ ಉದ್ಬೂರು ಚೆಕ್ ಪೋಸ್ಟ್ನಲ್ಲಿ ಅಕ್ರಮವಾಗಿ ಡೋಲಿನಲ್ಲಿ ಮದ್ಯ ಸಾಗಣೆ ಮಾಡುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಅರಣ್ಯ ಇಲಾಖೆ ಜಾಗೃತಿ ದಳದವರು ದಾಳಿ ಮಾಡಿ ಪರಿಶೀಲನೆ ಮಾಡಿದಾಗ ಸತ್ಯ ಹೊರಬಂದಿದೆ.
ಡೊಳ್ಳಿನಲ್ಲಿ ಎರಡು ಕಡೆ 20 ದಿನಗಳಿಂದ ನಿರಂತರ ಅಕ್ರಮ ಮದ್ಯ ಸರಬರಾಜು ಮಾಡುತ್ತಿದ್ದ ಖದೀಮರನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ.