ಕರ್ನಾಟಕ

karnataka

ಅಬಕಾರಿ ದಾಳಿ: ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ವಶಕ್ಕೆ

By

Published : Apr 30, 2020, 2:08 PM IST

ಲಾಕ್ ಡೌನ್​ನಿಂದ ಮದ್ಯ ಮಾರಾಟ ನಿಷೇಧ ಮಾಡಿದ್ದರೂ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾರೀ‌ ಪ್ರಮಾಣದ ಅಕ್ರಮ ಮದ್ಯ ವಶಪಡಿಸಲಾಗಿದೆ.

customs
customs

ಮೈಸೂರು: ಅಕ್ರಮ ದಾಸ್ತಾನು ಗೋದಾಮಿನ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು 3.32 ಲಕ್ಷ ರೂ‌. ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ವಶಕ್ಕೆ

ಲಾಕ್ ಡೌನ್​ನಿಂದ ಮದ್ಯ ಮಾರಾಟ ನಿಷೇಧ ಮಾಡಿದ್ದರೂ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾರೀ‌ ಪ್ರಮಾಣದ ಅಕ್ರಮ ಮದ್ಯ ವಶಪಡಿಸಲಾಗಿದ್ದು, ಕೆ.ಆರ್.ಎಸ್ ರಸ್ತೆಯ ಕೋಸ್ಟಲ್ ಗಾರ್ಡನ್ ರೆಸ್ಟೋರೆಂಟ್ ಪಕ್ಕದ ಸ್ಪಿರಿಟ್ ಜಂಕ್ಷನ್ ಬಳಿ ಮದ್ಯದ ಅಕ್ರಮ ದಾಸ್ತಾನು ಪತ್ತೆ ಹಚ್ಚಿದ ಅಧಿಕಾರಿಗಳು, ಸುಮಾರು 3.32 ಲಕ್ಷ ರೂ. ಮೌಲ್ಯದ ಬಿಯರ್ ಹಾಗೂ ವೈನ್ ಬಾಟಲಿಗಳನ್ನು ಜಪ್ತಿ ಮಾಡಿದ್ದಾರೆ.

ಅಕ್ರಮ ದಾಸ್ತಾನು ಇರಿಸಿದ್ದ ಕಟ್ಟಡ ಮಾಲೀಕರ ವಿರುದ್ದ ಕೇಸ್ ದಾಖಲಾಗಿದ್ದು, ಅಕ್ರಮ ಮದ್ಯ ಯಾರಿಗೆ ಸೇರಿದ್ದೆಂದು ತನಿಖೆ ನಡೆಸಲು ಅಬಕಾರಿ ಅಧಿಕಾರಿಗಳು ಮುಂದಾಗಿದ್ದಾರೆ.

ABOUT THE AUTHOR

...view details