ಮೈಸೂರು:ಕದ್ದ ಬೈಕ್ಅನ್ನು ಬೇರೆ ಬೇರೆ ಅಪರಾಧ ಪ್ರಕರಣಕ್ಕೆ ಬಳಸಿರುವ ಘಟನೆ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.
ನಿಮ್ಮ ಬೈಕ್ ಕಳ್ಳತನವಾದ್ರೆ ತಕ್ಷಣ ದೂರು ನೀಡಿ: ಡಿಸಿಪಿ ಗೀತಾ ಪ್ರಸನ್ನ - ಡಿಸಿಪಿ ಗೀತಾ ಪ್ರಸನ್ನ ಸೂಚನೆ
ಅಪರಾಧ ಪ್ರಕರಣಗಳಿಗೆ ಕಳ್ಳತನದ ಬೈಕ್ ಬಳಕೆ ಮಾಡಲಾಗುತ್ತಿದೆ. ನಿಮ್ಮ ಬೈಕ್ ಕಳ್ಳತನವಾದ್ರೆ ತಕ್ಷಣ ದೂರು ನೀಡಿ ಎಂದು ಡಿಸಿಪಿ ಗೀತಾ ಪ್ರಸನ್ನ ತಿಳಿಸಿದ್ದಾರೆ.
ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಪಿ ಗೀತಾ ಪ್ರಸನ್ನ, ಬೈಕ್ ಕಳೆದು ಹೋದಲ್ಲಿ ತಕ್ಷಣ ದೂರು ನೀಡಿ. ಇಲ್ಲವಾದರೆ ಬೈಕ್ ಮಾಲೀಕರಿಗೆ ತೊಂದರೆಯಾಗಲಿದೆ. ಕಳ್ಳತನ ಮಾಡಿದ ಬೈಕ್ಅನ್ನು ಬೇರೆ ಅಪರಾಧಕ್ಕೆ ಬಳಕೆ ಮಾಡಲಾಗಿದೆ. ಈ ಸಂಬಂಧ ಇದೀಗ ಒಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಕಳ್ಳತನ ಮಾಡಿ ಅಪರಾಧ ಕೃತ್ಯಗಳಲ್ಲಿ ಬೈಕ್ ಬಳಸಿದ ಹಿನ್ನೆಲೆ ಸೈಯದ್ ವಾಸೀಂ ಎಂಬಾತನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ. ಹಾಗಾಗಿ ಬೈಕ್ ಕಳೆದು ಹೋದಲ್ಲಿ ತಕ್ಷಣ ದೂರು ನೀಡಿ. ವಾಹನಗಳ ಬಗ್ಗೆ ಜವಾಬ್ದಾರಿ ವಹಿಸಿ, ಎಚ್ಚರಿಕೆಯಿಂದಿರಿ ಎಂದು ಡಿಸಿಪಿ ಗೀತಾ ಪ್ರಸನ್ನ ಸೂಚನೆ ನೀಡಿದ್ದಾರೆ.