ಮೈಸೂರು: ಕೊರೊನಾ ಸೋಂಕು ಉಲ್ಬಣಗೊಳ್ಳಿತ್ತಿರುವುದರಿಂದ ಚೆಕ್ಪೋಸ್ಟ್ನಲ್ಲಿ ವಾಹನ ತಪಾಸಣೆ ಮತ್ತಷ್ಟು ಬಿಗಿಗೊಳಿಸಿದೆ. ಕೊರೊನಾ ವರದಿ ನೆಗೆಟಿವ್ ಇದ್ದರೆ ಮಾತ್ರ ಎಂಟ್ರಿ ಎಂದು ಜಿಲ್ಲಾ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಹೇಳಿದ್ದಾರೆ.
ಕೊರೊನಾ ನೆಗೆಟಿವ್ ಇದ್ರೆ ಮಾತ್ರ ಮೈಸೂರಿಗೆ ಎಂಟ್ರಿ: ಎಸ್ಪಿ ರಿಷ್ಯಂತ್ ಕಟ್ಟಪ್ಪಣೆ
ಕೊರೊನಾ ವರದಿ ನೆಗೆಟಿವ್ ಇದ್ರೆ ಮಾತ್ರ ಮೈಸೂರಿಗೆ ಬರಲು ಅವಕಾಶ. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಎಂಟ್ರಿ ಇಲ್ಲಾ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಎಸ್ಪಿ, ಎಚ್.ಡಿ ಕೋಟೆ ತಾಲೂಕಿನ ಬಾವಲಿ ಚೆಕ್ ಪೋಸ್ಟ್ ಮೂಲಕ ಕೇರಳ ಹಾಗೂ ಇತರ ಭಾಗಗಳಿಂದ ಬರುವ ಪ್ರವಾಸಿಗರಿಗೆ ಆರ್ಟಿಪಿಸಿಆರ್ ವರದಿ ನೆಗೆಟಿವ್ ಇದ್ದರೆ ಒಳಗೆ ಬಿಡಿ ಎಂದು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಕಳೆದ ವರ್ಷ ಕೊರೊನಾ ಜಾಸ್ತಿಯಾಗುತ್ತಿದ್ದಂತೆ ಸಾರ್ವಜನಿಕರು ಎಚ್ಚೆತ್ತುಕೊಂಡಿದ್ದರು. ಆದರೀಗ ಮೈ ಮರೆಯುತ್ತಿದ್ದಾರೆ.
ಕೊರೊನಾದಿಂದ ಹಾಗೂ ಫೈನ್ನಿಂದ ತಪ್ಪಿಸಿಕೊಳ್ಳಬೇಕಾದರೆ ಮಾಸ್ಕ್ ಹಾಕಿ ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಜಾತ್ರೆ, ಜನರು ಗುಂಪು ಸೇರಿಕೊಂಡು ಮಾಡುವ ಕಾರ್ಯಕ್ರಮಗಳಿಗೆ ಅನುಮತಿ ನೀಡುವುದಿಲ್ಲ. ಯುಗಾದಿ ಹಬ್ಬ ಕೆಲವೇ ದಿನಗಳು ಬಾಕಿ ಇದ್ದು, ಹಬ್ಬ ಎಂದು ಜೂಜಾಟವಾಡಲು ಗುಂಪು ಗುಂಪಾಗಿ ಸೇರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಎಚ್ಚರಿಕೆ ನೀಡಿದ್ದಾರೆ.