ಮೈಸೂರು :ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಶಾಸಕರ ಕಿತ್ತಾಟದ ಸಮಸ್ಯೆಯನ್ನು ನಾಳೆಯೊಳಗೆ ಬಗೆಹರಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಸಿ ಹಾಗೂ ಶಾಸಕರ ವಿಚಾರವನ್ನ ಮಾಧ್ಯಮಗಳಲ್ಲಿ ನೋಡಿದ್ದೀನಿ. ಈಗಾಗಲೇ ಕಂದಾಯ ಸಚಿವ ಆರ್.ಅಶೋಕ್ ಅವರು ಮಡಿಕೇರಿಗೆ ಜಿಲ್ಲಾಧಿಕಾರಿಯನ್ನು ಕರೆಸಿಕೊಂಡು ಮಾಹಿತಿ ಪಡೆದಿದ್ದಾರೆ.
ಶಾಸಕರಾದ ಹೆಚ್ ಪಿ ಮಂಜುನಾಥ್, ಸಾ ರಾ ಮಹೇಶ್, ತನ್ವೀರ್ ಸೇಠ್, ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಎಲ್ಲರ ಜೊತೆ ಮಾತನಾಡುತ್ತೇನೆ. ನಾಳೆಯೊಳಗೆ ಎಲ್ಲವನ್ನ ಬಗೆಹರಿಸಿ ಹೋಗುವಂತೆ ಹೇಳುತ್ತೇನೆ ಎಂದರು.
ಸಚಿವ ಎಸ್ ಟಿ ಸೋಮಶೇಖರ್ ಮಾತನಾಡಿದರು ಸಚಿವ ರಮೇಶ್ ಜಾರಕಿಹೊಳಿ ಬಿಟ್ಟು ಸಭೆ :ನಾವು ಒಟ್ಟಿಗೆ ಸೇರಿ ಸುಮಾರು ದಿವಸ ಆಗಿತ್ತು. ಮುನಿರತ್ನ ಜಯಭೇರಿಸಿದ ಹಿನ್ನೆಲೆ ನಾವೆಲ್ಲ ಒಟ್ಟಾಗಿ ಸೇರಿದೆವು. ಸಚಿವ ರಮೇಶ್ ಜಾರಕಿಹೊಳಿ ಬಿಟ್ಟು ಸೇರಿದ್ದೀವಿ ಎಂಬುವುದಕ್ಕೆ ನೋ ಪಾಲಿಟಿಕ್ಸ್ ಎಂದರು.
ಹೆಚ್ ವಿಶ್ವನಾಥ್, ಎಂಟಿಬಿ ನಾಗರಾಜ್, ಆರ್ ಶಂಕರ್ ಅವರಿಗೆ ಸಚಿವ ಸ್ಥಾನ ನೀಡುವುದು ಅಥವಾ ಬಿಡುವುದು ಸಿಎಂಗೆ ಬಿಟ್ಟ ಪರಮಾಧಿಕಾರ. ನಾವು ಸಭೆ ಸೇರಿ ಸಚಿವ ಸಂಪುಟದ ಬಗ್ಗೆ ಒತ್ತಡ ಹಾಕುವ ಪ್ರಯತ್ನ ಮಾಡಿಲ್ಲ ಎಂದರು.