ಮೈಸೂರು :ಕೊರೊನಾ ವಿಚಾರವಾಗಿ ಎನ್ ಆರ್ ಕ್ಷೇತ್ರದಲ್ಲಿ ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷನಾಗಿ ನಾನೇ ಇರುತ್ತೀನಿ. ನಾನು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದ್ದಾರೆ.
‘ಕೊರೊನಾ ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷನಾಗಿ ನಾನೇ ಇರುತ್ತೇನೆ’ - ತನ್ವೀರ್ ಸೇಠ್ - Mysore DC Office
ಅನಾರೋಗ್ಯದ ಸಮಸ್ಯೆಯಿಂದಾಗಿ ರಾಜಕೀಯದಿಂದ ಕೊಂಚ ದೂರಾಗಿದ್ದ ಶಾಸಕ ತನ್ವೀರ್ ಸೇಠ್ ಇದೀಗ ಕೊರೊನಾ ನಿಯಂತ್ರದ ಹೊಣೆ ಹೊರಲು ಸಿದ್ಧರಾಗಿದ್ದಾರೆ. ಅಲ್ಲದೆ ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷರಾಗಿ ಮುಂದುವರಿಯುವುದಾಗಿಯೂ ತಿಳಿಸಿದ್ದಾರೆ..
![‘ಕೊರೊನಾ ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷನಾಗಿ ನಾನೇ ಇರುತ್ತೇನೆ’ - ತನ್ವೀರ್ ಸೇಠ್ I will continuing as a chairman of the Corona Task Force Committee: tanveer seth](https://etvbharatimages.akamaized.net/etvbharat/prod-images/768-512-8167846-thumbnail-3x2-mys.jpg)
‘ಕೊರೊನಾ ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷನಾಗಿ ನಾನೇ ಇರುತ್ತೇನೆ’: ತನ್ವೀರ್ ಸೇಠ್
ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಕ್ಷೇತ್ರದ ಮಾಹಿತಿ ಪಡೆದು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನಾರೋಗ್ಯ ಕಾರಣದಿಂದ ಜನರಿಂದ ದೂರವಾಗಿದ್ದೆ. ಆದರೀಗ ಆರೋಗ್ಯದಲ್ಲಿ ಸುಧಾರಣೆಯಾಗುತ್ತಿದೆ. ಕ್ಷೇತ್ರದಲ್ಲಿದ್ದು ಕೆಲಸ ಮಾಡುವೆ. ಸಂಸದ ಪ್ರತಾಪ್ ಸಿಂಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿದ್ದೇನೆ ಎಂದರು.
‘ಕೊರೊನಾ ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷನಾಗಿ ನಾನೇ ಇರುತ್ತೇನೆ’.. ಶಾಸಕ ತನ್ವೀರ್ ಸೇಠ್
ನನ್ನ ಕ್ಷೇತ್ರದಲ್ಲಿ ಕೊರೊನಾದಿಂದ ಉಂಟಾಗಿರುವ ಸಮಸ್ಯೆ ಹಾಗೂ ಅದರ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ಕ್ಷೇತ್ರದಲ್ಲಿ ಕೊರೊನಾ ಸೋಂಕು ಹರಡದಂತೆ ತಡೆಯಲು ಅಧಿಕಾರಿಗಳಿಗೆ ಸಲಹೆ ನೀಡುತ್ತೇನೆ ಎಂದರು.