ಕರ್ನಾಟಕ

karnataka

ETV Bharat / state

ಪರಿವಾರ-ತಳವಾರ ಸಮುದಾಯ ಎಸ್​​​ಟಿಗೆ ಸೇರಿಸುತ್ತೇನೆ: ಶ್ರೀರಾಮುಲು ಭರವಸೆ - Ramulun statementy in hunasuru

ಉಪ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಸಚಿವ ಶ್ರೀರಾಮುಲು, ಕಲ್ ಕೂಡಿಕೆ ಗ್ರಾಮಸ್ಥರಲ್ಲಿ ಪರಿವಾರ-ತಳವಾರ ಸಮುದಾಯವನ್ನು ಎಸ್​​ಟಿಗೆ ಸೇರಿಸುವುದಾಗಿ ಭರವಸೆ ನೀಡಿದ್ದಾರೆ.

SriRamulu
ಪರಿವಾರ-ತಲವಾರ ಸಮುದಾಯಕ್ಕೆ ಭರವಸೆ ನೀಡಿದ ರಾಮುಲು

By

Published : Nov 27, 2019, 5:41 PM IST

ಮೈಸೂರು:ಮುಂದಿನ ತಿಂಗಳೊಳಗೆ ಪರಿವಾರ-ತಳವಾರ ಸಮುದಾಯವನ್ನು ಎಸ್​ಟಿ ಸಮುದಾಯಕ್ಕೆ ಸೇರಿಸುವಂತಹ ಕೆಲಸ‌ ಮಾಡಿಕೊಡುತ್ತೇನೆ ಎಂದು ಸಚಿವ ಶ್ರೀರಾಮುಲು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.

ಸಚಿವ ಶ್ರೀರಾಮುಲು

ಹುಣಸೂರು ಉಪ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಪಣ ತೊಟ್ಟಿರುವ ಸಚಿವ ಶ್ರೀರಾಮುಲು, ಒಂದು ವಾರದಿಂದ ಹುಣಸೂರಿನಲ್ಲೇ ಠಿಕಾಣಿ ಹೂಡಿದ್ದು, ಇಂದು ಕಲ್ ಕೂಡಿಕೆ ಗ್ರಾಮದ ಗ್ರಾಮಸ್ಥರನ್ನು ಉದ್ದೇಶಿಸಿ ಮಾತಾನಾಡಿದರು. ಪರಿವಾರ-ತಳವಾರ ಸಮುದಾಯವನ್ನು ಎಸ್​​ಟಿ ಸಮುದಾಯಕ್ಕೆ ಸೇರಿಸಬೇಕು ಎಂದು ಪಾರ್ಲಿಮೆಂಟ್​​ನಲ್ಲಿ ಚರ್ಚೆ ಮಾಡಿ, ಮುಂದಿನ ತಿಂಗಳೊಳಗೆ ಈ ಕಾರ್ಯ ಪೂರ್ಣಗೊಳ್ಳುವಂತೆ ಕೆಲಸ ಮಾಡಿಕೊಡುತ್ತೇನೆ ಎಂದರು.

ABOUT THE AUTHOR

...view details