ಮೈಸೂರು :ಧರ್ಮವನ್ನು ಇಟ್ಟುಕೊಂಡು ಆರ್ಎಸ್ಎಸ್ ಹಾಗೂ ತಾಲಿಬಾನ್ ಕೆಲಸ ಮಾಡುತ್ತವೆ. ಆದ್ದರಿಂದ ಆರ್ಎಸ್ಎಸ್ ಸಂಘಟನೆಯನ್ನು ತಾಲಿಬಾನ್ಗೆ ಹೋಲಿಕೆ ಮಾಡಿರುವ ಹೇಳಿಕೆಗೆ ಈಗಲೂ ಬದ್ಧ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್ಎಸ್ಎಸ್ ಹಾಗೂ ತಾಲಿಬಾನ್ ಸಂಘಟನೆಗಳಿಗೆ ಕೆಲವು ಹೋಲಿಕೆಗಳಿವೆ. ಅದನ್ನು ಆಧಾರವಾಗಿಟ್ಟುಕೊಂಡು ಆರ್ಎಸ್ಎಸ್ ಅನ್ನು ತಾಲಿಬಾನ್ಗೆ ಹೋಲಿಕೆ ಮಾಡಿದ್ದೇನೆ. ಆರ್ಎಸ್ಎಸ್ ಮತ್ತು ತಾಲಿಬಾನಿಗಳು ಧರ್ಮವನ್ನು ಪ್ರತಿಪಾದನೆ ಮಾಡುತ್ತಾರೆ. ಜಾತ್ಯಾತೀತ ನಿಲುವುಗಳಲ್ಲಿ ಬದ್ಧತೆ ಇಲ್ಲ ಎಂದರು.
ಆರ್ಎಸ್ಎಸ್ನ ಕಾರ್ಯಕರ್ತ ನಾಥೂರಾಮ್ ಗೋಡ್ಸೆ, ಮಹಾತ್ಮ ಗಾಂಧೀಜಿಯನ್ನು ಗುಂಡಿಕ್ಕಿ ಕೊಲೆ ಮಾಡಿದ. ಆ ಸಮಯದಲ್ಲಿ ಸ್ವಾತಂತ್ರ್ಯ ಬಂದ ನಂತರ ಅಂದಿನ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಆರ್ಎಸ್ಎಸ್ ಸಂಘಟನೆಯನ್ನು ಬ್ಯಾನ್ ಮಾಡಿದ್ದರು ಎಂದರು.