ಕರ್ನಾಟಕ

karnataka

ETV Bharat / state

ಸಚಿವನಾಗಿದ್ದಾಗ ಅವಮಾನ ಆಗ್ತಿತ್ತು, ಈಗ ನೆಮ್ಮದಿಯಾಗಿದ್ದೇನೆ: ಜಿಟಿಡಿ - ಮಾಜಿ ಸಚಿವ ಜಿ.ಟಿ.ದೇವೇಗೌಡ

ಹಿಂದಿನ ಸರ್ಕಾರದಲ್ಲಿ ಮಂತ್ರಿಯಾಗಿದ್ದಾಗ ನನಗೆ ನಿತ್ಯ ಅವಮಾನ, ಅಪಮಾನಗಳಾಗುತ್ತಿದ್ದವು. ಆದರೆ ಈಗ ಆರಾಮವಾಗಿ ಕ್ಷೇತ್ರದ ಜನರ ಕೆಲಸ ಮಾಡಿಕೊಂಡಿದ್ದೇನೆ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿಕೆ ನೀಡಿದ್ದಾರೆ.

GT Devegowda, ಜಿ.ಟಿ.ದೇವೇಗೌಡ

By

Published : Sep 5, 2019, 1:38 PM IST

ಮೈಸೂರು:ಹಿಂದಿನ ಸರ್ಕಾರದಲ್ಲಿ ಸಚಿವನಾಗಿದ್ದಾಗ ನನಗೆ ನಿತ್ಯ ಅವಮಾನ, ಅಪಮಾನಗಳಾಗುತ್ತಿದ್ದವು. ಆದರೆ ಈಗ ಆರಾಮವಾಗಿ ಕ್ಷೇತ್ರದ ಜನರ ಕೆಲಸ ಮಾಡಿಕೊಂಡಿದ್ದೇನೆ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿಕೆ ನೀಡಿದ್ದಾರೆ.

ಮಾಜಿ ಸಚಿವ ಜಿ.ಟಿ.ದೇವೇಗೌಡ

ಇಂದು ಕಲಾಮಂದಿರದಲ್ಲಿ ಶಿಕ್ಷಕ ದಿನಾಚರಣೆಯಲ್ಲಿ ಭಾಗವಹಿಸಲು ಆಗಮಿಸಿದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಜಿ.ಟಿ.ದೇವೇಗೌಡ ಮಾಧ್ಯಮಗಳ ಜೊತೆ ಮಾತನಾಡಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸಿದ ಮೇಲೆ ಕುಮಾರಸ್ವಾಮಿ ತಾಯಿ ಚಾಮುಂಡೇಶ್ವರಿ ಆಶಿರ್ವಾದದಿಂದ ಮುಖ್ಯಮಂತ್ರಿಯಾದರು. ಆದರೆ ನನಗೆ ಉನ್ನತ ಶಿಕ್ಷಣ ಖಾತೆ ಬೇಡ ಎಂದು ಹೇಳಿದರು ಕೂಡ ಖಾತೆಯನ್ನು ಬದಲು ಮಾಡಿ ಕೊಡಲಿಲ್ಲ. ಆದರೂ ಅದೇ ಖಾತೆಯಲ್ಲಿ ಮುಂದುವರೆದು ಉತ್ತಮ ಕೆಲಸ ಮಾಡಿರುವ ತೃಪ್ತಿಯಿದೆ ಎಂದರು.

ಇನ್ನೂ ಹಿಂದಿನ ಸರ್ಕಾರದ ಬಗ್ಗೆ ಮಾತನಾಡಿ ನಾವು ಕೊನೆಯ ಕ್ಷಣದವರೆಗೂ ಸರ್ಕಾರವನ್ನು ಉಳಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದೇವೆ. ಆದರೆ ಸರ್ಕಾರ ಉಳಿಯಲಿಲ್ಲ. ಈ ವೇಳೆ ರಾಜೀನಾಮೆ ಕೊಟ್ಟು ದೇವೇಗೌಡರ ಮನೆಗೆ ಹೋದ ಸಮಯದಲ್ಲಿ ಕುಮಾರಸ್ವಾಮಿ, ರೇವಣ್ಣ ನೀವು ನಿಮ್ಮ ಮಗನನ್ನು ಹುಣಸೂರಿನಿಂದ ಚುನಾವಣೆಗೆ ನಿಲ್ಲಿಸಿ ಎಂದು ಕೇಳಿದರು. ಆಗ ನಾನು ಇನ್ನೂ ಮುಂದೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ನನ್ನ ಮಗನನ್ನು ಹುಣಸೂರಿನಿಂದ ಸ್ಪರ್ಧೆ ಮಾಡುವುದಿಲ್ಲ, ಬೇಕಿದ್ದರೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾನೆ ಎಂದು ಹೇಳಿರುವೆ ಎಂದರು.

ಈ ಹಿಂದೆ ನಾನು ಮಂತ್ರಿಯಾದಾಗ ರಾಜಕೀಯ ಗೊತ್ತಿಲ್ಲದ ಕೆಲವು ವ್ಯಕ್ತಿಗಳಿಂದ ಅವಮಾನ ಆಗುತ್ತಿತ್ತು. ಅಪಮಾನ ಆಗುತ್ತಿತ್ತು. ಆದರೆ ಈಗ ಕ್ಷೇತ್ರದ ಕೆಲಸ ಮಾಡಿಕೊಂಡು ಆರಾಮವಾಗಿದ್ದೇನೆ ಎಂದಿದ್ದಾರೆ.

ABOUT THE AUTHOR

...view details