ಕರ್ನಾಟಕ

karnataka

ETV Bharat / state

ನನಗೆ ಅಖಂಡ ಕರ್ನಾಟಕದ ಮುಖ್ಯಮಂತ್ರಿ ಆಗುವ ಆಸೆ ಇದೆ: ಸಚಿವ ಉಮೇಶ್ ಕತ್ತಿ - ಸಿದ್ದರಾಮಯ್ಯಗೆ ಟಾಂಗ್​ ನೀಡಿದ ಸಚಿವ ಉಮೇಶ್​ ಕತ್ತಿ

9 ಬಾರಿ ಶಾಸಕನಾಗಿ ಆಯ್ಕೆಯಾಗಿರುವ ಸಚಿವ ಉಮೇಶ್​ ಕತ್ತಿ ಮುಖ್ಯಮಂತ್ರಿ ಆಗಬೇಕೆಂಬ ಆಕಾಂಕ್ಷೆ ಹೊಂದಿದ್ದಾರೆ.

ಸಚಿವ ಉಮೇಶ್ ಕತ್ತಿ
ಸಚಿವ ಉಮೇಶ್ ಕತ್ತಿ

By

Published : Jun 30, 2022, 3:18 PM IST

Updated : Jun 30, 2022, 3:24 PM IST

ಮೈಸೂರು:ನನಗೆ ಅಖಂಡ ಕರ್ನಾಟಕದ ಮುಖ್ಯಮಂತ್ರಿ ಆಗುವ ಆಸೆ ಇದೆಯೇ ವಿನಃ, ಉತ್ತರ ಕರ್ನಾಟಕ ವಿಭಜನೆ ಮಾಡಿ ಸಚಿವ ಆಗುವ ಹಂಬಲವಿಲ್ಲ. ಅತೀ ಹೆಚ್ಚು ಬಾರಿ ಗೆದ್ದಿರುವ ಹಿರಿಯ ಶಾಸಕ ನಾನು. ರಾಜ್ಯ ವಿಭಜನೆ ಮಾಡಿ ಮುಖ್ಯಮಂತ್ರಿ ಆಗುವ ಆಸೆ ಇಲ್ಲ. ರಾಜ್ಯಗಳ ವಿಭಜನೆಯಿಂದ ಆಡಳಿತ, ಅಭಿವೃದ್ಧಿಯಲ್ಲಿ ಸುಧಾರಣೆ ತರುವ ಉದ್ದೇಶದಿಂದ ಪ್ರತ್ಯೇಕ ರಾಜ್ಯಕ್ಕಾಗಿ ಮಾತನಾಡುತ್ತಿರುವೆ ಅಷ್ಟೇ, ಮಂತ್ರಿ ಆಗುವುದಕ್ಕಲ್ಲ ಎಂದು ಸಚಿವ ಉಮೇಶ್ ಕತ್ತಿ ಸ್ಪಷ್ಟನೆ ನೀಡಿದ್ದಾರೆ.

ಅರಣ್ಯ ಸಚಿವ ಉಮೇಶ್ ಕತ್ತಿ

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಂಧ್ರಪ್ರದೇಶ ಎರಡು ರಾಜ್ಯವಾಗಿ ವಿಭಜನೆಗೊಂಡಿದ್ದರೂ ಸಹ ಅಲ್ಲಿ ಮಾತನಾಡುವುದು ಒಂದೇ ಭಾಷೆಯನ್ನೇ. ಕೇಂದ್ರ ಸರ್ಕಾರದ ಮುಂದೆ ದೇಶದಲ್ಲಿ 50 ರಾಜ್ಯಗಳ ಸ್ಥಾಪನೆಯ ಕುರಿತು ಚರ್ಚಿಸಲಾಗುವುದು. ರಾಜ್ಯಗಳು ಚಿಕ್ಕದಾದಷ್ಟು ಅಭಿವೃದ್ಧಿ ಮತ್ತು ಕಾನೂನಾತ್ಮಕ ಕಾರ್ಯಗಳ ಚಾಲನೆ, ರಾಜ್ಯ ಮತ್ತು ಜನತೆಯ ಏಳಿಗೆಗೆ ಶ್ರಮಿಸಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ:ಮಂಗಳೂರಿನಲ್ಲಿ ಭಾರಿ ಮಳೆ- ಜನಜೀವನ ಅಸ್ತವ್ಯಸ್ಥ: ದೇವಸ್ಥಾನ, ಮನೆಗಳಿಗೆ ನುಗ್ಗಿದ ನೀರು

ಬೆಳಗಾವಿ ಎಂದಿಗೂ ಕರ್ನಾಟಕಕ್ಕೆ ಸೇರಿದ್ದು, ಅದು ಸೇರಿ ದಶಕಗಳೇ ಕಳೆದಿವೆ. ಗಡಿ ಸಂಬಂಧ ಪ್ರತಿಯೊಂದು ರಾಜ್ಯದಲ್ಲಿಯೂ ಪರ-ವಿರೋಧ ಕ್ಯಾತೆಗಳನ್ನು ತೆಗೆಯುವ ಜನ ಇದ್ದೇ ಇರುತ್ತಾರೆ. ರಾಜ್ಯದಲ್ಲಿ ಪ್ರತಿಯೊಂದು ಜಿಲ್ಲೆಯಲ್ಲೂ ಮೃಗಾಲಯ ಮಾಡಬೇಕೆಂಬ ಚಿಂತನೆ ಇದ್ದು, ಇದಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲೂ ಸ್ಥಳಗಳನ್ನ ಗುರುತು ಮಾಡಿ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸುತ್ತೇವೆ. ಅಲ್ಲಿಂದ ಅನುಮತಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಿದ್ದರಾಮಯ್ಯಗೆ ಮಾಡೋಕೆ ಕೆಲಸ ಇಲ್ಲ: ಪ್ರತಿಪಕ್ಷದ ನಾಯಕ‌ ಸಿದ್ದರಾಮಯ್ಯಗೆ ಮಾಡೋಕೆ ಕೆಲಸ ಇಲ್ಲ. ಪದೇ ಪದೇ ಉಮೇಶ್ ಕತ್ತಿಗೆ ಬೈಯುವ ಬದಲು ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಲಿ. ರಾಜ್ಯದ ಅಭಿವೃದ್ಧಿ ಬಗ್ಗೆ ಅವರಿಗೆ ಚಿಂತನೆ ಇಲ್ಲ. ಹಿಂದೆ ಪಾದಯಾತ್ರೆ ಮಾಡಿ ಆಲಮಟ್ಟಿ ಅಭಿವೃದ್ಧಿ ಮಾಡ್ತಿವಿ ಅಂದ್ರು ಮಾಡಿದ್ರಾ?. ಕಾಂಗ್ರೆಸ್ ಅವಧಿಯಲ್ಲೇ ಉತ್ತರ ಕರ್ನಾಟಕ ಅಭಿವೃದ್ಧಿ ಆಗಿಲ್ಲ ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಟಾಂಗ್ ನೀಡಿದರು.

Last Updated : Jun 30, 2022, 3:24 PM IST

For All Latest Updates

TAGGED:

ABOUT THE AUTHOR

...view details