ಕರ್ನಾಟಕ

karnataka

ETV Bharat / state

ಸಚಿವರುಗಳ ಸಹಾನುಭೂತಿ ನನಗೆ ಬೇಕಿಲ್ಲ: ಎಚ್. ವಿಶ್ವನಾಥ್ - Member of Parliament Vishwanath

ಹುಣಸೂರು ತಾಲೂಕಿನ ನಾಗಪುರ ಹಾಡಿಗೆ ಸ್ನೇಹಿತರೊಂದಿಗೆ ಹೋಗುವಾಗ ಕುಶಲೋಪರಿ ವೇಳೆ ವಿಧಾನಪರಿಷತ್ ಸದಸ್ಯ ಎಚ್​​. ವಿಶ್ವನಾಥ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ನನ್ನ ಬಗ್ಗೆ ಸಚಿವರುಗಳ ಬಾಯಿಮಾತಿನ ಸಹಾನುಭೂತಿ ಬೇಕಿಲ್ಲ. ಆದರೂ ಒಬ್ಬಂಟಿಯಲ್ಲವೆಂದು ಹೇಳಿದ್ದಕ್ಕೆ ಅಭಿನಂದಿಸುವೆ ಎಂದಿದ್ದಾರೆ.

H. Vishwanath
ವಿಧಾನಪರಿಷತ್ ಸದಸ್ಯ ಎಚ್​​. ವಿಶ್ವನಾಥ್

By

Published : Jan 28, 2021, 1:43 PM IST

Updated : Jan 28, 2021, 2:24 PM IST

ಮೈಸೂರು: ಸಚಿವರುಗಳ ಸಹಾನುಭೂತಿ ನನಗೆ ಬೇಕಿಲ್ಲ ಎಂದು ಹೇಳುವ ಮೂಲಕ ಬಿಜೆಪಿಯ 17 ಮಂದಿ ಸಂಗಡಿಗರಿಗೆ ವಿಧಾನಪರಿಷತ್ ಸದಸ್ಯ ಎಚ್​​. ವಿಶ್ವನಾಥ್ ಟಾಂಗ್ ನೀಡಿದ್ದಾರೆ.

ಸಚಿವರುಗಳ ಸಹಾನುಭೂತಿ ನನಗೆ ಬೇಕಿಲ್ಲ- ಎಚ್. ವಿಶ್ವನಾಥ್

ಹುಣಸೂರು ತಾಲೂಕಿನ ನಾಗಪುರ ಹಾಡಿಗೆ ಸ್ನೇಹಿತರೊಂದಿಗೆ ಹೋಗುವಾಗ ಕುಶಲೋಪರಿ ವೇಳೆ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. 17 ಮಂದಿ ಟೀಮ್,​​ ಸಿಎಂ ಜೊತೆ ಮಾತನಾಡಬೇಕಿತ್ತು. ಅದು ಬಿಟ್ಟು, ನನ್ನ ಬಗ್ಗೆ ಸಚಿವರುಗಳ ಬಾಯಿಮಾತಿನ ಸಹಾನುಭೂತಿ ಬೇಕಿಲ್ಲ. ಆದರೂ ಒಬ್ಬೊಂಟಿಯಲ್ಲವೆಂದು ಹೇಳಿದ್ದಕ್ಕೆ ಅಭಿನಂದಿಸುವೆ. ಸಚಿವ ಎಂಟಿಬಿ ನಾಗರಾಜ್, ವಿಶ್ವನಾಥ್ ನಮ್ಮ ಜೊತೆಯಲ್ಲೇ ಇದ್ದಾರೆಂದು ಹೇಳಿದ್ದಾರೆ ಎಂದರು.

ಓದಿ:ನಿಮಗೆ ಸಚಿವರಾಗಲು ಕಾನೂನು ಮಾನ್ಯತೆ ಇಲ್ಲ: ಹೆಚ್​ ವಿಶ್ವನಾಥ್​ಗೆ ಶಾಕ್​ ಕೊಟ್ಟ ಸುಪ್ರೀಂ

ನಾವೆಲ್ಲರೂ ಜೊತೆಯಲ್ಲೇ ಇದ್ದೇವೆ. ಆದರೆ ಅವರು ಮಂತ್ರಿಯಾಗಿದ್ದಾರೆ. ಎಲ್ಲವೂ ಪವರ್ ಪಾಲಿಟಿಕ್ಸ್ ಬಿಡಿ, ನಾನು ಕ್ಯಾಬಿನೆಟ್‌ ದರ್ಜೆ ಸಚಿವನಾಗಿದ್ದವನು. ವಿಧಾನಪರಿಷತ್ ಉಪಸಭಾಪತಿ ಹುದ್ದೆ ಒಪ್ಪಲಾರೆ. ಆದರೆ ಪಕ್ಷ, ಸಿಎಂ ವಿಶ್ವಾಸವಿಟ್ಟು ಸಭಾಪತಿ ಹುದ್ದೆ ಕಲ್ಪಿಸಿದರೆ ನೋಡೋಣ ಎಂದು ಹೇಳಿದ್ದಾರೆ.

Last Updated : Jan 28, 2021, 2:24 PM IST

ABOUT THE AUTHOR

...view details