ಮೈಸೂರು:ನಾನು ಮೈಮುಲ್ ಚುನಾವಣೆಗೆ ಧುಮುಕ್ಕಿಲ್ಲ. ನಾನು ಪ್ರವೇಶ ಮಾಡಿದ್ರೆ, ನಾನು ವರ್ಸಸ್ ಕುಮಾರಸ್ವಾಮಿ ಆಗಿರೋದು ಎಂದು ಹೇಳುವ ಮೂಲಕ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ, ಜೆಡಿಎಸ್ ದಳಪತಿಗಳಿಗೆ ಟಕ್ಕರ್ ಕೊಟ್ಟಿದ್ದಾರೆ.
ಮೈಮುಲ್ ಚುನಾವಣೆ ಬಳಿಕ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ನಾನು ಅಖಾಡಕ್ಕೆ ಇಳಿದಿಲ್ಲ. ನನ್ನ ಮಗ ಹರೀಶ್ ಹಾಗೂ ಸಹಕಾರಿಗಳು ಚುನಾವಣೆ ಎದುರಿಸಿದ್ದಾರೆ. ಜಿಟಿಡಿ ಏನೋ ಮಾಡದೇ ಇದ್ದರು, ನನ್ನ ವಿರುದ್ಧ ಅವರು (ಕುಮಾರಸ್ವಾಮಿ) ತಿರುಗಿ ಬಿದ್ದಿದ್ದಾರೆ ಎಂದು ಕುಟುಕಿದರು.
ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಬಾಮೈದ ಕೆ.ಎಸ್.ಮಧುಚಂದ್ರ ಅವರಿಗೆ ಚುನಾವಣೆ ಕಷ್ಟ ಅಂತ ಹೇಳಿದ್ದೆ. ಆದರೆ, ಅವರು ಕೇಳಲಿಲ್ಲ ಎಂದರು.