ಮೈಸೂರು: ಮತ್ತೊಂದು ಜೀವ ಉಳಿಸಲು ಪ್ಲಾಸ್ಮಾ ದಾನಕ್ಕೆ ನಾನು ಸಿದ್ಧನಿದ್ದೇನೆ ಎಂದು ಕೊರೊನಾದಿಂದ ಗುಣಮುಖರಾದ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ತಿಳಿಸಿದ್ದಾರೆ.
ಪ್ಲಾಸ್ಮಾ ದಾನ ಮಾಡಲು ಸಿದ್ಧನಿದ್ದೇನೆ: ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ - Police Commissioner Dr. Chandragupta
ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನಾನು ಕೂಡ ಪ್ಲಾಸ್ಮಾ ದಾನ ಮಾಡಲು ಸಿದ್ಧನಿದ್ದೇನೆ ಎಂದು ಮೈಸೂರು ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ತಿಳಿಸಿದ್ದಾರೆ.
Chandragupta
ಕೊರೊನಾದಿಂದ ಗುಣಮುಖರಾದ ನಂತರ ಡಾ. ಚಂದ್ರಗುಪ್ತ ಮೊದಲ ಬಾರಿಗೆ ಮಾಧ್ಯಮಗಳ ಜೊತೆ ತಮ್ಮ ಅನುಭವ ಹಂಚಿಕೊಂಡಿದ್ದು, ಕೊರೊನಾ ಪಾಸಿಟಿವ್ ದೃಢವಾದಾಗ ಸ್ವಲ್ಪ ಮಟ್ಟಿಗೆ ಆತಂಕ ಇತ್ತು. ಆದರೆ ಚಿಕಿತ್ಸೆ ಪಡೆಯುವಾಗ ಪ್ರಾಣಾಯಾಮ, ಬಿಸಿ ನೀರು ಸೇವೆನೆ, ವಿಟಮಿನ್ ಆಹಾರ ಪದಾರ್ಥಗಳ ಸೇವೆನೆ ಹಾಗೂ ಉತ್ತಮ ಚಿಕಿತ್ಸೆಯಿಂದ ಗುಣಮುಖನಾಗಿದ್ದೇನೆ ಎಂದರು.
ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಕೊರೊನಾ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದ ಅವರು, ನಾನು ಪ್ಲಾಸ್ಮಾ ನೀಡಲು ಸಿದ್ಧನಿದ್ದೇನೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.