ಕರ್ನಾಟಕ

karnataka

ETV Bharat / state

4 ಭೂ ಹಗರಣಗಳ ತನಿಖೆಗೆ ಒತ್ತಾಯ: ಪ್ರಾ. ಆಯುಕ್ತರ ಕಚೇರಿಯಲ್ಲಿ ಹೈಡ್ರಾಮಾ - ರೋಹಿಣಿ ಸಿಂಧೂರಿ

ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶಿಸಿರುವ 4 ಭೂ ಹಗರಣಗಳ ಕುರಿತು ತನಿಖೆ ಮಾಡಿ ಎಂದು ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಲು ಮುಂದದಾಗ ಪ್ರಾದೇಶಿಕ ಆಯುಕ್ತ ಹಾಗೂ ಸಾಮಾಜಿಕ ಹೋರಾಟಗಾರರ ನಡುವೆ ಮಾರಿನ ಚಕಮಕಿ ನಡೆದಿದೆ.

hydrama-in-mysore-regional-commissioner-office
ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಹೈಡ್ರಾಮ

By

Published : Jun 11, 2021, 5:37 PM IST

ಮೈಸೂರು: ಭೂ ಹಗರಣದ 4 ಆದೇಶಗಳ ಬಗ್ಗೆ ತನಿಖೆ ನಡೆಸಬೇಕೆಂದು ಮನವಿ ನೀಡಲು ಬಂದ ವೇಳೆ RTI ಕಾರ್ಯಕರ್ತರು ಹಾಗೂ ಪ್ರಾದೇಶಿಕ ಆಯುಕ್ತರ ನಡುವೆ ಮಾತಿನ ಚಕಮಕಿ ನಡೆದು ಕಚೇರಿಯಲ್ಲೇ ಹೈಡ್ರಾಮಾ ನಡೆದಿದೆ.

ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಹೈಡ್ರಾಮ
ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್​ರನ್ನು ಭೇಟಿ ಮಾಡಲು ಕಚೇರಿಗೆ ಬಂದ ಸಾಮಾಜಿಕ ಹೋರಾಟಗಾರದ ಗಂಗರಾಜು, ಕರ್ಣಕರ್ ಹಾಗೂ ಭಾನುಮೋಹನ್, ಕೇವಲ ಸಾ.ರಾ. ಕನ್ವೆನ್ಷನ್ ಹಾಲ್ ಒಂದನ್ನು ತನಿಖೆ ಮಾಡಬೇಡಿ. ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶಿಸಿರುವ 4 ಭೂ ಹಗರಣಗಳ ಕುರಿತು ತನಿಖೆ ಮಾಡಿ ಎಂದು ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಲು ಮುಂದಾದಾಗ ಈ ಮನವಿಯನ್ನು ನನಗೆ ನೀಡಬೇಡಿ ಜಿಲ್ಲಾಧಿಕಾರಿಗೆ ನೀಡಿ ಎಂದಾಗ ಮಾತಿನ ಚಕಮಕಿ ನಡೆದಿದೆ.
ನಂತರ ಘಟನೆಯನ್ನು ವಿವರಿಸಿದ ಸಾಮಾಜಿಕ ಕಾರ್ಯಕರ್ತ ಗಂಗರಾಜು , ಸಾ.ರಾ.ಕನ್ವೆನ್ಷನ್ ಹಾಲ್ ಇರುವ ಭೂಮಿ ಸಾರಾ ಮಹೇಶ್​ ಹೆಂಡತಿಯ ಹೆಸರಿನಲ್ಲಿ ವಸತಿ ನಿರ್ಮಾಣಕ್ಕಾಗಿ ಪರವಾನಿಗೆ ಪಡೆಯಲಾಗಿದೆ. ಆದರೆ ಅದನ್ನು ಕಲ್ಯಾಣ ಮಂಟಪದ ಉಪಯೋಗಕ್ಕೆ ಅಂದರೇ ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಇದರ ಜೊತೆಗೆ 4 ಭೂ ಹಗರಣಗಳ ಬಗ್ಗೆ ತನಿಖೆ ಮಾಡಬೇಕೆಂದು ಪ್ರಾದೇಶಿಕ ಆಯುಕ್ತರಲ್ಲಿ ಮನವಿ ನೀಡಲು ಬಂದಾಗ ಈ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ‌ ನೀಡಿ ಎಂದು ಸ್ವೀಕರಿಸಲು ನಿರಾಕರಿಸಿದರು.ಕೊನೆಗೆ ನಾವು ಕಾನೂನಿನ ಬಗ್ಗೆ ಮಾತನಾಡಿದಾಗ ಮನವಿ ಸ್ವೀಕರಿಸಿದರು ಎಂದಿದ್ದಾರೆ.

ABOUT THE AUTHOR

...view details