ಮೈಸೂರು: ಹಳೆ ಲವರ್ ಮೇಲಿನ ಆಸೆಯಿಂದ ತುಂಬು ಗರ್ಭಿಣಿ ಪತ್ನಿಯ ಕೆನ್ನೆಗೆ ಪತಿರಾಯ ಹೊಡೆದು, ಬಳಿಕ ಆಕೆಯನ್ನು ಕೊಲೆಗೈದ ಘಟನೆ ಮೈಸೂರಿನಲ್ಲಿ ನಡೆದಿದೆ.
ಜಯನಗರದ ಚಿನ್ನಗಿರಿ ಕೊಪ್ಪಲಿನ ಕೀರ್ತನಾ (19) ಕೊಲೆಯಾದ ದುರ್ದೈವಿ. ಪತಿ ರಾಘವೇಂದ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಘವೇಂದ್ರ, ಸುಂದರಿ ಎಂಬ ಮಹಿಳೆಯೊಂದಿಗೆ 5 ವರ್ಷದಿಂದ ಸಂಬಂಧ ಹೊಂದಿದ್ದ. ಅಲ್ಲದೇ ಕಳೆದ ಒಂದು ವರ್ಷದ ಹಿಂದೆ ಚಾಮರಾಜನಗರ ಮೂಲದ ಕೀರ್ತನಾಳನ್ನು ವಿವಾಹವಾಗಿದ್ದ. ವಿವಾಹದ ನಂತರವೂ ಸಂಬಂಧ ಮುಂದುವರೆಸಿದ್ದ ಈತ, ಪ್ರೇಯಸಿಯೊಂದಿಗಿನ ಖಾಸಗಿ ವಿಡಿಯೋವನ್ನು ಪತ್ನಿಗೆ ತೋರಿಸಿ ಕಿರುಕುಳ ನೀಡುತ್ತಿದ್ದ ಎನ್ನಲಾಗ್ತಿದೆ.
ಓದಿ: ಬೀದಿ ನಾಯಿ ಮೇಲೆ ಕಾಮುಕನ ಪೈಶಾಚಿಕ ಕೃತ್ಯ: ವೈದ್ಯಕೀಯ ಪರೀಕ್ಷೆಗೆ ಶ್ವಾನ ಹಾಜರ್
ಇದರಿಂದ ಸಾಕಷ್ಟು ಗಲಾಟೆಗಳು ನಡೆದಿದ್ದವು. ಇಂದು ಕೂಡ ಗಲಾಟೆ ನಡೆದು ಗರ್ಭಿಣಿ ಪತ್ನಿ ಕೀರ್ತನಾಳನ್ನ ಹೊಡೆದು, ಬಳಿಕ ನೇಣು ಹಾಕಿದ್ದಾನೆ ಎಂದು ಆರೋಪ ಮಾಡಲಾಗಿದೆ. ನಂತರ ಅಕ್ಕಪಕ್ಕದ ಮನೆಯವರಿಗೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಂಬಿಸಲು ಮುಂದಾಗಿದ್ದಾನೆ. ಈತನ ಹಿನ್ನೆಲೆ ತಿಳಿದಿದ್ದ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ರಾಘವೇಂದ್ರನನ್ನು ಬಂಧಿಸಿ ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.