ಮೈಸೂರು : ವಿವಾಹೇತರ ಸಂಬಂಧದ ಅನುಮಾನದ ಮೇಲೆ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ ಮೆಟಗಳ್ಳಿ ಬಳಿ ನಡೆದಿದೆ. ಕೊಲೆ ಮಾಡಿದ ಬಳಿಕ ಪತಿ ತಾನಾಗೆ ಬಂದು ಮೇಟಗಳ್ಳಿ ಪೋಲಿಸ್ ಠಾಣೆಯಲ್ಲಿ ಪೊಲೀಸರಿಗೆ ಶರಣಾನಾಗಿದ್ದಾನೆ. ಕೊಲೆಯಾದವರನ್ನು ಕಾವೇರಿ ಗಡಾಯಿ (40) ಎಂದು ಗುರುತಿಸಲಾಗಿದೆ. ಆರೋಪಿ ಪ್ರಮೋದ್ ಕುಮಾರ್ ಪೊಲೀಸರ ವಶದಲ್ಲಿದ್ದಾನೆ.
ಕಳೆದ ಆರು ತಿಂಗಳ ಹಿಂದೆ ಹರಿಯಾಣದಿಂದ ಪ್ರಮೋದ್ ಕುಮಾರ್ ದಂಪತಿ ಮೇಟಗಳ್ಳಿಯಲ್ಲಿ ಬಂದು ನೆಲೆಸಿದ್ದರು. ಖಾಸಗಿ ಕಾರ್ಖಾನೆಯಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ ಪ್ರಮೋದ್ ಕುಮಾರ್ ಜನಾ (43) ತನ್ನ ಪತ್ನಿ ಒಡಿಶಾ ಮೂಲದ ಕಾವೇರಿ ಗಡಾಯಿ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸುತ್ತಿದ್ದನು. ಆಗಾಗ್ಗೆ ಈ ವಿಚಾರವಾಗಿ ಆಕೆಯೊಂದಿಗೆ ಜಗಳ ಸಹ ಮಾಡುತ್ತಿದ್ದ ಎಂದು ತಿಳಿದುಬಂದಿದೆ.